ಶನಿವಾರ, ಡಿಸೆಂಬರ್ 4, 2021
26 °C

ಡ್ರಗ್ಸ್‌ ಪ್ರಕರಣ: ಎನ್‌ಸಿಬಿಯಿಂದ ನಟಿ ಅನನ್ಯಾ ಪಾಂಡೆ ಮೊಬೈಲ್, ಲ್ಯಾಪ್‌ಟಾಪ್‌ ವಶ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್‌ಸಿಬಿ ಗುರುವಾರ ದಾಳಿ ನಡೆಸಿದೆ.

ಈ ಸಂದರ್ಭದಲ್ಲಿ ಅನನ್ಯಾ ಪಾಂಡೆಗೆ ಸೇರಿವೆ ಎನ್ನಲಾದ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದೇ ವೇಳೆ ಮುಂಬೈನ ಎನ್‌ಸಿಬಿ ಕಚೇರಿಯಲ್ಲಿ ಅನನ್ಯಾ ಪಾಂಡೆ ಅವರ ವಿಚಾರಣೆ ನಡೆಸಲಾಗಿದೆ.

ಅಕ್ಟೋಬರ್ 3 ರಂದು ಮುಂಬೈನ ಕರಾವಳಿಯಲ್ಲಿ ಐಷಾರಾಮಿ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿತ್ತು. ಆ ವೇಳೆ ಬಾಲಿವುಡ್‌ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್‌ರನ್ನು ಬಂಧಿಸಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಪಾಂಡೆ ಹೆಸರು ಕೇಳಿಬಂದಿದೆ.

22 ವರ್ಷದ ಅನನ್ಯಾ ಮತ್ತು ಆರ್ಯನ್ ಉತ್ತಮ ಸ್ನೇಹಿತರು. ಆರ್ಯನ್‌ ಜೊತೆಗಿನ ಚಾಟ್‌ ಆಧಾರದಲ್ಲಿ ಅನನ್ಯಾರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್ಯನ್‌ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 26ರಂದು ನಡೆಸುವುದಾಗಿ ಬಾಂಬೆ ಹೈಕೋರ್ಟ್ ತಿಳಿಸಿದೆ.

ಇದನ್ನೂ ಓದಿ- ನಟ ಶಾರುಕ್ ಖಾನ್‌ ನಿವಾಸದಲ್ಲಿ ಶೋಧ ಕಾರ್ಯಚರಣೆ ನಡೆಸಿಲ್ಲ: ಎನ್‌ಸಿಬಿ ಸ್ಪಷ್ಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು