ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ವಿಡಿಯೊ ಮೂಲಕ ಎರಡನೇ ಮಗುವಿನ ಆಗಮನದ ಖುಷಿ ಹಂಚಿಕೊಂಡ ದ್ರುವ ಸರ್ಜಾ ದಂಪತಿ

Published 25 ಆಗಸ್ಟ್ 2023, 7:20 IST
Last Updated 25 ಆಗಸ್ಟ್ 2023, 7:20 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದ್ರುವ ಸರ್ಜಾ ದಂಪತಿ ವರಮಹಾಲಕ್ಷ್ಮಿ ಹಬ್ಬದಂದು ಎರಡನೇ ಮಗುವಿನ ಆಗಮನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ವಿಶೇಷ ವಿಡಿಯೊದ ಮೂಲಕ ಖುಷಿ ಹಂಚಿಕೊಂಡ ದಂಪತಿ ‘ಸೆಪ್ಟೆಂಬರ್‌ನಲ್ಲಿ ಲಿಟ್ಲ್‌ಸ್ಟಾರ್‌ನ ಆಗಮನವಾಗುತ್ತಿದೆ’ ಎಂದು ಹೇಳಿದ್ದಾರೆ.

ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ದ್ರುವ ಸರ್ಜಾ ಅವರು ವಿಡಿಯೊವನ್ನು ಶೇರ್‌ ಮಾಡಿಕೊಂಡಿದ್ದಾರೆ.

ದ್ರುವ ಸರ್ಜಾ ಪೋಸ್ಟ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ದಂಪತಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ.

24 ನವೆಂಬರ್‌ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಮದುವೆಯಾಗಿದ್ದರು. 2022ರ ಅಕ್ಟೋಬರ್‌ನಲ್ಲಿ ಪ್ರೇರಣಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.  

ಸದ್ಯ ದ್ರುವಾ ಸರ್ಜಾ ಎ.ಪಿ ಅರ್ಜುನ್‌ ಜತೆಗಿನ ಮಾರ್ಟಿನ್‌ ಸಿನಿಮಾ ಶೂಟಿಂಗ್‌ ಮುಗಿಸಿದ್ದು, ಪ್ರೇಮ್‌ ಜತೆಗೆ ಕೆಡಿ ಸಿನಿಮಾ ಕೆಲಸಗಳಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT