ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯಿಂದ ಮರೆಗೆ ಇಮ್ರಾನ್‌ ಖಾನ್‌

Last Updated 19 ನವೆಂಬರ್ 2020, 1:55 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಇಮ್ರಾನ್‌ ಖಾನ್‌ ನಟನೆಯಿಂದ ದೂರ ಉಳಿದಿದ್ದಾರೆ. ಈ ಸಂದರ್ಭ ಬಾಲಿವುಡ್‌ ಜಗತ್ತಿನ ಏಳು ಬೀಳುಗಳನ್ನು ತೆರೆದಿಟ್ಟಿದ್ದಾರೆ.

‘ಚಿತ್ರಗಳು ಯಶಸ್ವಿಯಾದಾಗ ಅದರ ಕೀರ್ತಿ ನಿರ್ದೇಶಕರಿಗೇ ಹೋಗುತ್ತದೆ. ಚಿತ್ರಗಳು ವಿಫಲವಾದಾಗ ಎಲ್ಲ ನಿರ್ದೇಶಕರು ಆ ಸೋಲನ್ನು ನಟನ ಮೇಲೆ ಆರೋಪಿಸುತ್ತಾರೆ. ದೊಡ್ಡ ನಿರ್ದೇಶಕರದ್ದೂ ಇದೇ ಕಥೆ’.

‘ಚಿತ್ರ ಗೆದ್ದಾಗ ಪ್ರೇಕ್ಷಕರೂ ಕೂಡಾ ಯಶಸ್ಸನ್ನು ನಿರ್ದೇಶಕರಿಗೇ ಕೊಡುತ್ತಾರೆ. ಅವರು ಇವನನ್ನು (ಇಮ್ರಾನ್‌) ನಟಿಸುವಂತೆ ಮಾಡಿದರು ಎನ್ನುತ್ತಾರೆ. ಸೋತಾಗ ನಮ್ಮ ವಿರುದ್ಧ ಹರಿಹಾಯುತ್ತಾರೆ. ಇದೊಂದು ವಿಚಿತ್ರ ಪೃವೃತ್ತಿ’
ಎಂದು ಬೇಸರಿಸಿದ್ದಾರೆ.

‘ಹಾಗಿದ್ದರೂ ನನಗೆ ತೃಪ್ತಿ ಇದೆ. ಬಾಲಿವುಡ್‌ನಲ್ಲಿ ಇದ್ದಷ್ಟು ದಿನ ಒಳ್ಳೆಯ ಚಿತ್ರಗಳನ್ನು ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಇಮ್ರಾನ್‌ ಖಾನ್‌ 2008ರಲ್ಲಿ‘ಜಾನೆ ತು ... ಯಾ ಜಾನೆ ನಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ಮೊದಲ ಚಿತ್ರವೇ ಭರ್ಜರಿ ಯಶಸ್ಸು ಗಳಿಸಿತ್ತು. ಆ ಬಳಿಕ ಅವರದ್ದು ಏಳು ಬೀಳುಗಳ ಹಾದಿ.

‘ಡೆಲ್ಲಿ ಬೆಲ್ಲಿ’ ಮತ್ತು ‘ಮೇರೆ ಬ್ರದರ್‌ ಕಿ ದುಲ್ಹನ್‌’ ಯಶಸ್ಸು ಕಂಡಿದ್ದವು. ‘ಮಾತೃ ಕಿ ಬಿಜ್ಲೀ ಕಾ ಮಂಡೋಲಾ’ ಮತ್ತು ‘ಕಟ್ಟಿ ಬಟ್ಟಿ’ ಚಿತ್ರಗಳು ಸಾಮಾನ್ಯ ಯಸಸ್ಸು ಕಂಡಿದ್ದವು. ಆ ಬಳಿಕ ಬಾಲಿವುಡ್‌ನಲ್ಲಿ ಅವರಿಗೆ ಅವಕಾಶಗಳು ಕಡಿಮೆಯಾದವು.

ಈ ನಡುವೆ ‘ಮಿಷನ್‌ ಮಾರ್ಸ್‌: ಕೀಪ್‌ ವಾಕಿಂಗ್‌ ಇಂಡಿಯಾ’ ಹೆಸರಿನ ಕಿರುಚಿತ್ರವನ್ನೂ ನಿರ್ಮಿಸಿದ್ದಾರೆ.

‘ ನಾನೀಗ ನಟನಲ್ಲ ಎಂದು ಹೇಳಿಕೊಳ್ಳುವುದರಲ್ಲಿ ಯಾವ ವಿಷಾದ ಅಥವಾ ಬೇಸರವಾಗಲಿ ಇಲ್ಲ. ಅಥವಾ ಚಿತ್ರಗಳು ಸೋಲು ಕಂಡು ನನ್ನ ವೃತ್ತಿ ಜೀವನ ಕುಸಿದಾಗಲೂಅಚ್ಚರಿಪಡಲಿಲ್ಲ’ ಎಂದು ಖಾನ್‌ ಹೇಳುತ್ತಾರೆ.

ಮುಂದಿನ ದಾರಿಯ ಬಗ್ಗೆ ಸೂಕ್ಷ್ಮವಾಗಿ ತೆರೆದಿಟ್ಟಿರುವ ಖಾನ್‌, ‘ನಾನು ನಟನಲ್ಲ. ಆದರೆ ಒಬ್ಬ ಫಿಲಂ ಮೇಕರ್‌ʼ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT