ಗುರುವಾರ , ಅಕ್ಟೋಬರ್ 29, 2020
19 °C

ನಟ ಕೆ. ವಿಶ್ವನಾಥ್ ಆಸ್ಪತ್ರೆಗೆ ದಾಖಲು: ಆರ್ಥಿಕ ಸಹಾಯಕ್ಕೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಧುಮೇಹದಿಂದ ಬಳಲುತ್ತಿರುವ ಬಹುಭಾಷಾ ನಟ ಕೆ. ವಿಶ್ವನಾಥ್‌ ಇಲ್ಲಿನ ವಿಜಯನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗಾಗಲೇ ಅವರ ಕಾಲಿಗೆ ಶಸ್ತ್ರಚಿಕಿತ್ಸೆಯಾಗಿದೆ. ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದಿನನಿತ್ಯದ ಆಸ್ಪತ್ರೆಯ ಖರ್ಚಿಗೂ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.

ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ‘ಪಡುವಾರಹಳ್ಳಿ ಪಾಂಡವರು’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದರು. ‘ಚಲಿಸುವ ಮೋಡಗಳು’ ಸಿನಿಮಾವೂ ಸೇರಿದಂತೆ ವರನಟ ರಾಜ್‌ಕುಮಾರ್‌ ಜೊತೆಗೆ ಐದು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ತೆಲುಗಿನಲ್ಲಿ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಮತ್ತು ನಟ ನಾಗಾರ್ಜುನ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ಶಿವ’ ಚಿತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲೂ ಕೆ. ಬಾಲಚಂದರ್ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ವಿಶ್ವನಾಥ್‌ ಅವರ ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದೆ. ಕನ್ನಡ ಚಿತ್ರರಂಗದ ನಟ, ನಟಿಯರು, ಪ್ರೇಕ್ಷಕರು ಧನಸಹಾಯ ಮಾಡಲು ಕೋರಲಾಗಿದೆ.

ಅವರ ಬ್ಯಾಂಕ್‌ ಖಾತೆಯ ವಿವರ ಇಂತಿದೆ: –ಕೆ. ವಿಶ್ವನಾಥ್‌, ಸಿಂಡಿಕೇಟ್ ಬ್ಯಾಂಕ್, ವಿ.ವಿ.ಪುರಂ, ಉಳಿತಾಯ ಖಾತೆ ನಂಬರ್ -2010062749, ifsc code: SYNB0000440

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು