ಸೋಮವಾರ, ಜನವರಿ 17, 2022
20 °C

ನಟಿ ನಫೀಸಾ ಅಲಿ, ಮಾನ್ವಿ ಗಾಗ್ರೊ, ಗಾಯಕ ಅರ್ಜಿತ್ ಸಿಂಗ್‌ಗೆ ಕೋವಿಡ್ ದೃಢ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನಟಿ ನಫೀಸಾ ಅಲಿ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿರುವ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.

'ನನಗೇನು ಸಿಕ್ಕಿದೆ ಎಂಬುದನ್ನು ಊಹಿಸಿ! ಅದೃಷ್ಟ ಸಂಖ್ಯೆ 7ನೇ ಹಾಸಿಗೆ!! ತೀವ್ರ ಜ್ವರ ಮತ್ತು ಗಂಟಲಿನ ಸಮಸ್ಯೆಯಾಗಿದೆ. ಆದರೆ, ಗೋವಾದಲ್ಲಿನ ನನ್ನ ಸೂಪರ್ ವೈದ್ಯಕೀಯ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕವಾಸಕ್ಕಾಗಿ ಕೆಲವೇ ದಿನಗಳಲ್ಲಿ ಮನೆಗೆ ತೆರಳಬಹುದು ಎಂದು ಭಾವಿಸುತ್ತೇವೆ.... #ಕೋವಿಡ್ ಪಾಸಿಟಿವ್' ಎಂದು 64 ವರ್ಷದ ನಟಿ ಬರೆದುಕೊಂಡಿದ್ದಾರೆ.

ಹಿನ್ನೆಲೆ ಗಾಯಕ ಅರ್ಜಿತ್ ಸಿಂಗ್ ಮತ್ತು ಪತ್ನಿ ಕೋಯಲ್ ರಾಯ್ ಅವರಿಗೂ ಕೂಡ ಕೋವಿಡ್-19 ದೃಢಪಟ್ಟಿದೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದು, 'ನಾನು ಮತ್ತು ನನ್ನ ಪತ್ನಿಗೆ ಕೋವಿಡ್ ಪಾಸಿಟಿವ್ ಆಗಿದೆ. ನಾವಿಬ್ಬರೂ ಸಂಪೂರ್ಣವಾಗಿ ಕ್ಷೇಮವಾಗಿದ್ದೇವೆ ಮತ್ತು ನಾವು ಪ್ರತ್ಯೇಕವಾಸದಲ್ಲಿದ್ದೇವೆ' ಎಂದಿದ್ದಾರೆ.

ಇನ್ನೊಂದೆಡೆ ನಟಿ ಮಾನ್ವಿ ಗಾಗ್ರೊಗೆ ಕೂಡ ಕೊರೊನಾ ವೈರಸ್ ಸೋಂಕು ತಗುಲಿದ್ದು, ನಟಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್ ಮೂಲಕ ಮಾಹಿತಿ ನೀಡಿದ್ದಾರೆ.

ಶನಿವಾರವಷ್ಟೇ ಬಾಲಿವುಡ್‌ ನಿರ್ಮಾಪಕ ಮಧುರ್ ಭಂಡಾರ್ಕರ್‌ ಅವರಿಗೂ ಕೋವಿಡ್‌ ಇರುವುದು ಪತ್ತೆಯಾಗಿತ್ತು.

ಇತ್ತೀಚೆಗೆ ಬಾಲಿವುಡ್‌ನ ಜಾನ್ ಅಬ್ರಹಾಂ ಮತ್ತು ಅವರ ಪತ್ನಿ ಪ್ರಿಯಾ ರುಂಚಾಲ್, ನಿರ್ಮಾಪಕಿ ಏಕ್ತಾ ಕಪೂರ್, ನಟರಾದ ಮೃಣಾಲ್ ಠಾಕೂರ್, ನೋರಾ ಫತೇಹಿ, ಆಲಯಾ ಎಫ್, ಹಿರಿಯ ಚಲನಚಿತ್ರ ನಿರ್ಮಾಪಕ ರಾಹುಲ್ ರಾವೈಲ್, ನಿರ್ಮಾಪಕಿ ರಿಯಾ ಕಪೂರ್ ಮತ್ತು ಅವರ ಪತಿ ಕರಣ್ ಬೂಲಾನಿ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಅಲ್ಲದೆ, ಕಿರುತೆರೆ ನಟಿಯರಾದ ಶುಮೋನಾ ಚಕ್ರವರ್ತಿ, ಎರಿಕಾ ಫರ್ನಾಂಡಿಸ್, ವರುಣ್ ಸೂದ್ ಮತ್ತು ದ್ರಷ್ಟಿ ಧಾಮಿ ಅವರಿಗೂ ಸೋಂಕು ತಗುಲಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು