ಗುರುವಾರ , ಡಿಸೆಂಬರ್ 3, 2020
18 °C

ಚಿಕಿತ್ಸೆ ನೀಡಿದ ವೈದ್ಯೆಯ ಜೊತೆ ಸಪ್ತಪದಿ ತುಳಿದ ನಟ ಪ್ರಭುದೇವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ, ನೃತ್ಯ ನಿರ್ದೇಶಕ ಪ್ರಭುದೇವ ಮುಂಬೈನ ಫಿಸಿಯೊಥೆರಪಿಸ್ಟ್ ಜೊತೆ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಡಾ. ಹಿಮಾನಿ ಎಂಬ ಬಿಹಾರ ಮೂಲದ ವೈದ್ಯೆಯನ್ನು ವರಿಸಿದ್ದಾರೆ ಪ್ರಭುದೇವ. ಅವರ ಸಹೋದರ ಸುಂದರಂ ಈ ಜೋಡಿಯ ಮದುವೆಯ ವಿಷಯವನ್ನು ಖಚಿತ ಪಡಿಸಿದ್ದಾರೆ.

ಮೇನಲ್ಲಿ ನಡೆದ ಇವರ ವಿವಾಹ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಗಳಷ್ಟೇ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆಯ ಬಗ್ಗೆ ಪ್ರಭುದೇವ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ಹಿಂದೆ ಈ ನಟ ರಮ್ಲತ ಅವರನ್ನು ಮದುವೆಯಾಗಿದ್ದರು. ಆದರೆ 2011ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು.

ದಕ್ಷಿಣ ಭಾರತದ ಖ್ಯಾತ ನಟಿ ನಯನಾತಾರಾ ಜೊತೆ ಕೂಡ ಕೆಲ ಕಾಲ ಡೇಟಿಂಗ್ ನಡೆಸಿದ್ದರು ಪ್ರಭುದೇವ. ನಂತರ ಈ ಜೋಡಿ ಬೇರಾಗಿದ್ದರು. ನಯನತಾರಾ ಅವರನ್ನು ಬಹುವಾಗಿ ಪ್ರೀತಿಸಿದ್ದ ಪ್ರಭುದೇವ ಅವರನ್ನು ಮದುವೆಯಾಗುವ ಯೋಚನೆ ಮಾಡಿದ್ದರು. ಆದರೆ ಅಷ್ಟರಲ್ಲೇ ಈ ಜೋಡಿ ಬೇರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.