ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಕಾಶ್ಮೀರ್ ಫೈಲ್ಸ್: ಕಾಶ್ಮೀರಿ ಪಂಡಿತರ ಕ್ಷಮೆ ಕೇಳಿದ ನಟ ಪ್ರಕಾಶ್‌ ಬೆಳವಾಡಿ

Last Updated 12 ಮಾರ್ಚ್ 2022, 7:44 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿ ಪಂಡಿತರ ಒತ್ತಾಯದ ವಲಸೆ ಹಾಗೂ ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅನ್ಯಾಯವನ್ನು ಬಿಂಬಿಸುವ ಕಥಾ ಹಂದರ ಹೊಂದಿದೆ.

ಈ ಚಿತ್ರ ನೈಜ ಘಟನೆಗಳನ್ನು ಆಧರಿಸಿರುವ ಸಿನಿಮಾ. ಅನ್ಯಾಯಕ್ಕೆ ಒಳಗಾದವರು ಮತ್ತು ಸಮಸ್ಯೆಗಳಿಗೆ ಸಿಲುಕಿರುವವರನ್ನು ಭೇಟಿ ಮಾಡಿ ಚಿತ್ರಕಥೆ ಬರೆಯಲಾಗಿದೆ ಎಂದು ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಹೇಳಿದ್ದಾರೆ.

ಕನ್ನಡಿಗ ಪ್ರಕಾಶ್‌ ಬೆಳವಾಡಿ ಸೇರಿದಂತೆ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಚಿತ್ರವನ್ನು ವಿಕ್ಷಣೆ ಮಾಡಿದ ಬಳಿಕ ಪ್ರಕಾಶ್ ಬೆಳವಾಡಿ ವಿಡಿಯೊ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಕಾಶ್ಮೀರಿ ಪಂಡಿತರ ಕ್ಷಮೆ ಕೋರಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ನಟಿಸಿರುವುದಕ್ಕೆ ನನಗೆಖುಷಿಯಾಗಿದೆ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಚಿತ್ರದ ಸ್ಕ್ರಿಪ್ಟ್ ಓದಲು ನನಗೆ ಕಳುಹಿಸಿದ್ದರು. ಅದನ್ನು ಓದಿ ಶಾಕ್ ಆಯಿತು.1990ರ ಕಾಲಘಟ್ಟದಲ್ಲಿ ನಡೆದಿದ್ದ ಪಂಡಿತರ ನರಮೇಧ ಮತ್ತುವಲಸೆಯ ವಿವರಗಳು ಮತ್ತು ಅಂಕಿ ಅಂಶಗಳು ನನಗೆ ತಿಳಿದಿರಲಿಲ್ಲ. ಚಿತ್ರಕತೆ ಓದಿದಬಳಿಕ ಮಾಹಿತಿಗೊತ್ತಾಯಿತು ಎಂದು ಬೆಳವಾಡಿ ಹೇಳಿದ್ದಾರೆ.

90ರ ದಶಕದಲ್ಲಿ ನಾನು ಕೂಡ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಈ ಸಮಯದಲ್ಲಿ ಪಂಡಿತರ ಸಮಸ್ಯೆಗಳು, ಅವರು ಎದುರಿಸಿದ ಅನ್ಯಾಯ, ದೌರ್ಜನ್ಯ, ಅವರ ಹತ್ಯೆಗಳ ಮಾಹಿತಿಯನ್ನು ಜನರಿಗೆ ಹೇಳದಭಾಗವಾಗಿ ನಾನು ಇದ್ದೆ. ಈ ಕಾರಣಕ್ಕೆ ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸುತ್ತೇನೆ ಎಂದು ಬೆಳವಾಡಿ ಹೇಳಿದ್ದಾರೆ.

ಜನರಿಗೆ ಗೊತ್ತಿರದ ಕಾಶ್ಮೀರಿ ಪಂಡಿತರ ನೈಜ ಕತೆಯನ್ನು ತೆರೆಯ ಮೇಲೆ ತಂದಿರುವ ನಿರ್ದೇಶಕ ಅಗ್ನಿಹೋತ್ರಿ ಅವರಿಗೆ ಅಭಿನಂನದನೆಗಳನ್ನು ತಿಳಿಸಿದ್ದಾರೆ. ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಬೇಕು ಎಂದು ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT