ಶನಿವಾರ, ಸೆಪ್ಟೆಂಬರ್ 18, 2021
30 °C

ದುಬೈ ವಿಮಾನದಲ್ಲಿ ಏಕೈಕ ಪ್ರಯಾಣಿಕ: ಬೇಸರ ತೋಡಿಕೊಂಡ ನಟ ಮಾಧವನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

R Madhavan Instagram Screengrab

ಬೆಂಗಳೂರು: ದೇಶದಲ್ಲಿ ಕೋವಿಡ್ ನಿರ್ಬಂಧ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕೆ ವಿವಿಧ ನಿಯಮಗಳು ಜಾರಿಯಲ್ಲಿವೆ. ಇದೇ ಸಂದರ್ಭದಲ್ಲಿ ನಟ ಆರ್. ಮಾಧವನ್ ದುಬೈಗೆ ಹೋಗಿಬಂದಿದ್ದು, ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದೆ ಎಂದು ತಿಳಿಸಿದ್ದಾರೆ.

ದುಬೈಗೆ ಪ್ರಯಾಣಿಸಬೇಕಾದರೆ ಕೋವಿಡ್ ನೆಗೆಟಿವ್ ವರದಿ ಮತ್ತು ಲಸಿಕೆ ಪ್ರಮಾಣಪತ್ರ ಕಡ್ಡಾಯವಾಗಿದೆ. ಇವು ಇಲ್ಲದಿದ್ದರೆ, ಪ್ರಯಾಣಕ್ಕೆ ಅನುಮತಿ ಇರುವುದಿಲ್ಲ.

ಮಾಧವನ್ ಪ್ರಯಾಣಿಸಿದ ಸಂದರ್ಭದಲ್ಲಿ ಅವರೊಬ್ಬರೇ ಇದ್ದಿದ್ದು, ಖಾಲಿ ವಿಮಾನ ಮತ್ತು ಏರ್‌ಪೋರ್ಟ್ ಕಂಡು ಅಚ್ಚರಿ ಜತೆಗೆ  ಬೇಸರವಾಯಿತು ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಧವನ್ ಅವರು ವಿಡಿಯೊ ಪೋಸ್ಟ್ ಮಾಡಿದ್ದಾರೆ. 

ವಿಮಾನ ನಿಲ್ದಾಣಗಳು ಖಾಲಿ ಹೊಡೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಪರಿಸ್ಥಿತಿ ಬೇಗನೇ ಸುಧಾರಿಸಲಿ, ಎಲ್ಲ ಮೊದಲಿನಂತಾಗಲಿ ಎಂದು ಮಾಧವನ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು