ಭಾನುವಾರ, ಜನವರಿ 17, 2021
16 °C

ಯುವರಾಜ್‌ ಸ್ವಾಮಿಯಿಂದ ಹಣ ಪಡೆದ ಆರೋಪ: ವಿಚಾರಣೆಗೆ ಹಾಜರಾದ ರಾಧಿಕಾ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Radhika Kumarswamy

ಬೆಂಗಳೂರು: ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.

ಡಾಲರ್ಸ್‌ ಕಾಲೊನಿ ನಿವಾಸದಿಂದ ಸಿಸಿಬಿ ಕಚೇರಿಯತ್ತ ಹೊರಟ ರಾಧಿಕಾ ಅವರು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಹಲವು ದಾಖಲೆಗಳೊಂದಿಗೆ ಅವರು ಸಿಸಿಬಿ ಕಚೇರಿಗೆ ತೆರಳಿದ್ದಾರೆ.

ಇದನ್ನೂ ಓದಿ: ಯುವರಾಜ್ ಸ್ವಾಮಿ ವಂಚನೆ ಪ್ರಕರಣ: ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್

ಸಿಸಿಬಿ ಪೊಲೀಸ್ ಸಹಾಯಕ ಆಯುಕ್ತ ನಾಗರಾಜ್ ನೇತೃತ್ವದ ತಂಡ ರಾಧಿಕಾ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದೆ.

ರಾಜಕಾರಣಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಆರೋಪದ ಮೇರೆಗೆ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್ (ಸ್ವಾಮಿ) ಖಾತೆಯಿಂದ ರಾಧಿಕಾ ಅವರಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಗೊಂಡಿರುವ ಆರೋಪವಿದೆ. ಆ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಧಿಕಾ ಸ್ಪಷ್ಟನೆ ನೀಡಿದ್ದರು.

ಯುವರಾಜ್ ಖಾತೆಯಿಂದ ರಾಧಿಕಾ ಅವರಿಗೆ ₹1.25 ಕೋಟಿ ವರ್ಗಾವಣೆಯಾಗಿರುವ ಆರೋಪವಿದೆ. ಆದರೆ, ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದ ರಾಧಿಕಾ, ಐತಿಹಾಸಿಕ ಸಿನಿಮಾ ಮಾಡಲು ಯುವರಾಜ್ ಮುಂಗಡವಾಗಿ ₹15 ಲಕ್ಷ ನೀಡಿದ್ದರು. ಬೇರೆ ನಿರ್ಮಾಪಕರಿಂದ ₹60 ಲಕ್ಷ ಹಾಕಿಸಿದ್ದರು. ಆದರೆ, ಸಿನಿಮಾ ಅಗ್ರಿಮೆಂಟ್ ಆಗಲಿಲ್ಲ. ಇದಕ್ಕೂ ನನ್ನ ಸಹೋದರ ರವಿರಾಜ್‌ಗೂ ಸಂಬಂಧವಿಲ್ಲ’ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಐತಿಹಾಸಿಕ ಸಿನಿಮಾಗಾಗಿ ಒಟ್ಟು ₹75 ಲಕ್ಷ ಬಂದಿದೆ: ರಾಧಿಕಾ ಕುಮಾರಸ್ವಾಮಿ

ಹಣ ವರ್ಗಾವಣೆಗೆ ಸಂಬಂಧಿಸಿ ರಾಧಿಕಾ ಅವರ ಸಹೋದರ ರವಿರಾಜ್ ಅವರನ್ನೂ ಸಿಸಿಬಿ ಅಧಿಕಾರಿಗಳು ಕಳೆದ ವಾರ ವಿಚಾರಣೆಗೆ ಒಳಪಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು