ಶುಕ್ರವಾರ, ಮಾರ್ಚ್ 31, 2023
33 °C

ರಜನಿಕಾಂತ್ ಚಿತ್ರ, ಧ್ವನಿಯನ್ನು ಅನುಮತಿ ಇಲ್ಲದೆ ಬಳಸಿದರೆ ಕ್ರಮ: ವಕೀಲರ ಎಚ್ಚರಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೆಸರು, ಚಿತ್ರ, ಧ್ವನಿ ಅಥವಾ ಇತರ ವಿಶಿಷ್ಟ ಅಂಶಗಳನ್ನು ಅನಧಿಕೃತವಾಗಿ ಬಳಸದಂತೆ ಅವರ ವಕೀಲರಾದ ಎಸ್.ಇಳಂಭಾರತಿ ಅವರು ಸಾರ್ವಜನಿಕ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅವರ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ಸೂಚನೆಯಲ್ಲಿ ತಿಳಿಸಲಾಗಿದೆ.

ಶಿವಾಜಿ ರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್, ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ, ಯಶಸ್ವಿ ನಟರಲ್ಲಿ ಒಬ್ಬರು.

ಹಲವು ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ರಜನಿ ಅವರ ಹೆಸರು, ಧ್ವನಿ, ಚಿತ್ರ, ವ್ಯಂಗ್ಯ ಚಿತ್ರ ಮತ್ತು ಕಂ‍ಪ್ಯೂಟರ್ ಮೂಲಕ ನಿರ್ಮಿಸಿದ ಚಿತ್ರಗಳನ್ನು ಬಳಸಲಾಗುತ್ತಿದೆ. ಅವರ ಅನುಮತಿ ಇಲ್ಲದೆ ಚಿತ್ರದ ಬಳಕೆ ವಂಚನೆ ಎಂದು ಪರಿಗಣಿಸಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ತಮ್ಮ ವ್ಯಕ್ತಿತ್ವ, ಹೆಸರು, ಧ್ವನಿ, ಚಿತ್ರ ಮತ್ತು ವಿಶಿಷ್ಟ ಅಂಶಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವ ಹಕ್ಕು ರಜನಿಕಾಂತ್ ಅವರಿಗೆ ಮಾತ್ರವಿದೆ. ಹಾಗಾಗಿ, ಬೇರೆ ಯಾರೂ ಸಹ ಅವುಗಳನ್ನು ಅವರ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಎಂದು ಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು