ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕನ್ನಡಕ್ಕೆ ಬಂದ ಶರತ್‌ಕುಮಾರ್

Last Updated 19 ನವೆಂಬರ್ 2019, 11:18 IST
ಅಕ್ಷರ ಗಾತ್ರ

ಪವನ್ ಒಡೆಯರ್‌ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದ ಬಳಿಕ ಅವರು ಬಿಗ್‌ ಬಜೆಟ್‌ನ ‘ರೇಮೊ’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನವಿರು ಪ್ರೀತಿಯ ಸುತ್ತ ಇದರ ಕಥೆ ಹೆಣೆಯಲಾಗಿದೆ.

‘ರೋಗ್‌’ ಚಿತ್ರದ ಖ್ಯಾತಿಯ ಇಶಾನ್‌ ಇದರ ನಾಯಕ. ಅವರಿಗೆ ನಟಿ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಈಗ ‘ರೇಮೊ’ ತಂಡಕ್ಕೆ ದಕ್ಷಿಣ ಭಾರತದ ಖ್ಯಾತ ನಟ ಶರತ್‌ಕುಮಾರ್‌ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಅವರದು ಇಶಾನ್‌ನ ಅಪ್ಪನ ಪಾತ್ರವಂತೆ.

ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ‘ರಾಜಕುಮಾರ’ ಚಿತ್ರದಲ್ಲಿ ಶರತ್‌ಕುಮಾರ್‌ ಅವರು ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ಗೆ ತಂದೆಯಾಗಿ ನಟಿಸಿದ್ದರು. ತೆರೆಯ ಮೇಲೆ ಪುನೀತ್‌ ಮತ್ತು ಶರತ್‌ ಕಾಂಬಿನೇಷನ್‌ ಮೋಡಿ ಮಾಡಿತ್ತು. ಶರತ್‌ಕುಮಾರ್‌ ಅವರು ‘ಮೈನಾ’ ಮತ್ತು ಸಾರಥಿ ಚಿತ್ರದಲ್ಲಿಯೂ ನಟಿಸಿದ್ದರು. ಅವರು ನಟಿಸಿದ ಈ ಎಲ್ಲಾ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ‘ರೇಮೊ’ ಚಿತ್ರದಲ್ಲಿ ತಂದೆ ಮತ್ತು ಮಗನ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚಿದೆ. ಹಾಗಾಗಿಯೇ, ಶರತ್‌ಕುಮಾರ್‌ ಅವರನ್ನು ಕರೆತರಲಾಗಿದೆಯಂತೆ.

ಬೆಂಗಳೂರು, ಹೈದರಾಬಾದ್‌, ಸಿಂಗಪುರ, ಮಲೇಷ್ಯಾದಲ್ಲಿ ಈ ಚಿತ್ರದ ಚಿತ್ರೀಕರಣ ಕೈಗೊಳ್ಳಲಾಗಿದೆ. ಇದಕ್ಕೆ ಬಂಡವಾಳ ಹೂಡಿರುವುದು ಸಿ.ಆರ್‌. ಮನೋಹರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT