ಗುರುವಾರ , ಜನವರಿ 27, 2022
21 °C

ನಟಿಗೆ ಓಮೈಕ್ರಾನ್ ಸೋಂಕು, ಎಲ್ಲರೂ ಕೂಡಲೇ ಲಸಿಕೆ ಪಡೆಯಿರಿ ಎಂದ ಶೋಭನಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ನಟಿ ಮತ್ತು ಭರತನಾಟ್ಯ ಕಲಾವಿದೆ ಶೋಭನಾ ಅವರಿಗೆ ಕೊರೊನಾ ವೈರಸ್ ರೂಂಪಾಂತರ ತಳಿ ಓಮೈಕ್ರಾನ್ ಸೋಂಕು ತಗುಲಿದ್ದು, 'ಕೀಲು ನೋವು ಮತ್ತು ಶೀತ'ದ ತೊಂದರೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ 51 ವರ್ಷದ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

'ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ಹೊರತಾಗಿಯೂ ತನಗೆ ಕೋವಿಡ್-19 ದೃಢಪಟ್ಟಿದೆ. 'ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನನಗೆ ಓಮೈಕ್ರಾನ್ ಸೋಂಕು ತಗುಲಿದೆ. ಕೀಲು ನೋವು, ಶೀತ, ಗಂಟಲಿನ ತುರಿಕೆ ಮತ್ತು ನೋವಿನ ರೋಗ ಲಕ್ಷಣಗಳನ್ನು ಹೊಂದಿದ್ದೇನೆ. ನನ್ನ ರೋಗಲಕ್ಷಣಗಳು ತೀವ್ರವಾಗಿ ಕಡಿಮೆಯಾಗುತ್ತಿವೆ' ಎಂದು ಚೆನ್ನೈ ಮೂಲದ ನಟ ಸೆಲ್ಫಿ ಜೊತೆಗೆ ಬರೆದಿದ್ದಾರೆ' ಎಂದು ಶೋಭನಾ ಹೇಳಿದ್ದಾರೆ.

'ಸದ್ಯ ನಾನು ಎರಡೂ ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದು, ಯಾರೆಲ್ಲ ತೆಗೆದುಕೊಂಡಿಲ್ಲವೋ ಅವರು ಕೂಡಲೇ ಲಸಿಕೆ ಪಡೆಯಿರಿ. ಈ ರೂಪಾಂತರವು ಸಾಂಕ್ರಾಮಿಕ ರೋಗದ ಅಂತ್ಯವನ್ನು ಸೂಚಿಸುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಸೋಮವಾರ, ಭಾರತದಲ್ಲಿ 1,79,723 ಕೊರೊನಾ ವೈರಸ್ ಸೋಂಕುಗಳು ಒಂದೇ ದಿನ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,57,07,727 ಕ್ಕೆ ಏರಿಕೆಯಾಗಿದೆ. ಈ ಪೈಕಿ ದೇಶದಲ್ಲಿ ಈವರೆಗೆ 4,033 ಓಮೈಕ್ರಾನ್ ಪ್ರಕರಣಗಳು ಸೇರಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು