ಶನಿವಾರ, ಮೇ 15, 2021
23 °C

ನಟ ಸೋನು ಸೂದ್‌ಗೆ ಕೋವಿಡ್–19 ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನಟ ಸೋನು ಸೂದ್ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಸದ್ಯ ಅವರು ಪ್ರತ್ಯೇಕವಾಸದಲ್ಲಿದ್ದಾರೆ.

ಅವರು 10 ದಿನಗಳ ಹಿಂದಷ್ಟೇ (ಏಪ್ರಿಲ್ 7) ಕೋವಿಡ್ ಲಸಿಕೆ ಪಡೆದಿದ್ದರು.

ಓದಿ: 

‘ನನಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಪ್ರತ್ಯೇಕವಾಸದಲ್ಲಿದ್ದೇನೆ. ಹೆಚ್ಚಿನ ಜಾಗ್ರತೆ ವಹಿಸಿದ್ದೇನೆ. ಯಾರೂ ಚಿಂತಿಸಬೇಕಾಗಿಲ್ಲ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಇದು ನನಗೆ ಸಾಕಷ್ಟು ಸಮಯವನ್ನು ನೀಡಲಿದೆ. ನೆನಪಿಡಿ, ನಾನು ನಿಮ್ಮೆಲ್ಲರೊಂದಿಗೆ ಯಾವಾಗಲೂ ಇರುತ್ತೇನೆ’ ಎಂದು ಸೂದ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಅವರನ್ನು ಪಂಜಾಬ್‌ನ ಲಸಿಕೆ ಅಭಿಯಾನದ ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿತ್ತು. ಏಪ್ರಿಲ್ 10ರಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನೂ ಸೂದ್ ಭೇಟಿಯಾಗಿದ್ದರು.

ಓದಿ: 

ಕೋವಿಡ್‌ ಸಾಂಕ್ರಾಮಿಕ ಆರಂಭದ ಸಮಯದಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದಾಗ ವಲಸೆ ಕಾರ್ಮಿಕರು ತವರಿಗೆ ಮರಳಲು ನೆರವಾಗುವ ಮೂಲಕ ಸೂದ್ ಸುದ್ದಿಯಾಗಿದ್ದರು. ಸಾಂಕ್ರಾಮಿಕದಿಂದ ಸಂಕಷ್ಟಕ್ಕೀಡಾದವರ ನೆರವಿಗೆ ಸದಾ ಸಿದ್ಧನಾಗಿದ್ದು, ಆ ಕಾರ್ಯವನ್ನು ಮುಂದುವರಿಸುವುದಾಗಿಯೂ ಅವರು ಹೇಳಿದ್ದರು.

ಇನ್ನಷ್ಟು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು