ಶನಿವಾರ, ಸೆಪ್ಟೆಂಬರ್ 18, 2021
21 °C

ಚಾಮರಾಜನಗರ: ತಂದೆ ಹುಟ್ಟೂರಲ್ಲಿ ಸಮಯ ಕಳೆದ ಶಿವಣ್ಣ, ಅಪ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶಿವರಾಜ್‌ಕುಮಾರ್‌ ಹಾಗೂ ಅವರ ತಮ್ಮ ಪುನೀತ್‌ ರಾಜ್‌ಕುಮಾರ್‌ ಅವರು ಶುಕ್ರವಾರ ತಮ್ಮ ತಂದೆ, ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು, ಗಡಿಭಾಗ ತಮಿಳುನಾಡಿನ ಗಾಜನೂರಿಗೆ ಭೇಟಿ ನೀಡಿ ಸೋದರತ್ತೆ ನಾಗಮ್ಮ ಅವರ ಕುಟುಂಬದೊಂದಿಗೆ ಸಮಯ ಕಳೆದರು.

ನಾಗಮ್ಮ ಅವರ ಆರೋಗ್ಯ ವಿಚಾರಿಸಲು ತಮ್ಮ ಕುಟುಂಬದೊಂದಿಗೆ ಬಂದಿದ್ದ ಶಿವಣ್ಣ ಹಾಗೂ ಅಪ್ಪು ಅವರು, ಗಾಜನೂರಿನಲ್ಲಿ ಡಾ.ರಾಜ್‌ಕುಮಾರ್‌ ಅವರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು. ಎಲ್ಲರೂ ಜೊತೆಯಾಗಿ ಮಧ್ಯಾಹ್ನದ ಭೋಜನ ಸವಿದರು.

ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮನೆಯವರಿಗೂ ತಿಳಿಸಿದೆ ಅವರು ನೇರವಾಗಿ ಗಾಜನೂರಿಗೆ ಬಂದಿದ್ದರು. ಅದು ಹೇಗೋ ಗೊತ್ತಾಗಿ ಜನರು ಮನೆಯ ಸುತ್ತ ನೆರೆಯಲು ಆರಂಭಿಸಿದರು.

ಅಭಿಮಾನಿಗಳನ್ನು ನಿರಾಸೆಗೊಳಿಸದ ಶಿವಣ್ಣ ಹಾಗೂ ಅಪ್ಪು, ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಫೋಟೊಗೆ ಪೋಸ್‌ ನೀಡಿದರು. ಮಧ್ಯಾಹ್ನ 3.30ರ ಸುಮಾರಿಗೆ ಇಬ್ಬರೂ ಗಾಜನೂರಿನಿಂದ ಹೊರಟರು.


ಗಾಜನೂರಿನ ಅಭಿಮಾನಿಯೊಂದಿಗೆ ಶಿವಣ್ಣ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು