ಪ್ರವಾಸದಲ್ಲಿದ್ದರೂ ವರ್ಕೌಟ್ ತಪ್ಪಿಸಬಾರದು ಎಂದ ಅನುಷ್ಕಾ ಶರ್ಮಾ

ಬೆಂಗಳೂರು: ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಮತ್ತು ಸೆಲೆಬ್ರಿಟಿ ನಟಿ ಅನುಷ್ಕಾ ಶರ್ಮಾ, ಫಿಟ್ನೆಸ್ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ ಪಂದ್ಯದ ಸಲುವಾಗಿ ಅಲ್ಲಿಗೆ ತೆರಳಿದ್ದು, ಕೊಹ್ಲಿ ಜತೆ ಅನುಷ್ಕಾ ಮತ್ತು ಪುತ್ರಿ ವಮಿಕಾ ಕೂಡ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಅನುಷ್ಕಾ ಅವರು ವರ್ಕೌಟ್ ಮಾಡುವುದನ್ನು ಮಿಸ್ ಮಾಡಿಕೊಂಡಿಲ್ಲ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಸ್ವಲ್ಪ ವರ್ಕೌಟ್, ಸ್ವಲ್ಪ ಪೋಸ್ ಎಂದು ಹೇಳಿಕೊಂಡಿದ್ದಾರೆ.
ಅನುಷ್ಕಾ ಜತೆ ನದಿ ತೀರದಲ್ಲಿ ಸಂಜೆ: ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್
ಮಗಳ ಖಾಸಗಿತನದ ಕುರಿತು ವಿರಾಟ್–ಅನುಷ್ಕಾ ದಂಪತಿ ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ವಮಿಕಾ ಫೋಟೊ ತೆಗೆಯದಂತೆ ಮಾಧ್ಯಮದವರನ್ನು ಕೋರಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.