ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡ ನಟಿ ಮೇಘಾ ಶೆಟ್ಟಿ ‘ತ್ರಿಬಲ್ ರೈಡಿಂಗ್’, ‘ದಿಲ್ ಪಸಂದ್’, ‘ಕೈವ’ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದವರು. ಇದೀಗ ಅವರು ಕಾಲಿವುಡ್ಗೆ ಹೆಜ್ಜೆ ಇಟ್ಟಿದ್ದಾರೆ.

ಎಂ.ಗುರು ನಿರ್ದೇಶನದ, ಧರ್ಮರಾಜ್ ನಿರ್ಮಾಣ ಮಾಡುತ್ತಿರುವ ‘ಕಾಲೈಯನ್’ನಲ್ಲಿ ಮೇಘಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಶಿಕುಮಾರ್ ಚಿತ್ರದ ನಾಯಕ. ಸತ್ಯರಾಜ್, ಭರತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ತಂಡ ಸೇರಿಕೊಂಡಿರುವ ಮೇಘಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಪ್ರಾಜೆಕ್ಟ್ ಕುರಿತು ಮಾತನಾಡಿದ ಅವರು, ‘ಮಾರ್ಚ್ 11ರಿಂದ ಚಿತ್ರೀಕರಣ ಆರಂಭವಾಗಿದೆ. ನನ್ನ ಈ ಹಿಂದಿನ ಎಲ್ಲಾ ಪ್ರಾಜೆಕ್ಟ್ಗಳ ಆಧಾರದ ಮೇಲೆ ಈ ಸಿನಿಮಾ ನನಗೆ ದೊರೆತಿದೆ. ಅತ್ಯುತ್ತಮ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ದೊರೆತಿದೆ. ಇದೊಂದು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕೌಟುಂಬಿಕ ಕಥೆಯಾಗಿದೆ. ನನಗೆ ಮೊದಲೇ ಸ್ಕ್ರಿಪ್ಟ್ ನೀಡಿದ್ದರು. ನನ್ನೊಳಗೆ ಆ ಪಾತ್ರವನ್ನು ಕಾಣುವಷ್ಟು ಸಿದ್ಧತೆ ಮಾಡಿಕೊಂಡಿದ್ದೇನೆ. ತಮಿಳಿನಲ್ಲಿ ನಾನೇ ಡಬ್ಬಿಂಗ್ ಮಾಡಬೇಕು ಎಂದುಕೊಂಡಿದ್ದೇನೆ’ ಎಂದರು.

ತಮ್ಮ ಕನ್ನಡ ಸಿನಿಮಾಗಳ ವಿವರ ನೀಡಿದ ಮೇಘಾ, ‘After ಆಪರೇಷನ್ ಲಂಡನ್ CAFE’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇದು ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ. ‘ಚೀತಾ’ ಸಿನಿಮಾದ ಒಂದು ಹಾಡು ಬಾಕಿ ಇದೆ. ‘ಗ್ರಾಮಾಯಣ’ ಸಿನಿಮಾದ ಶೂಟಿಂಗ್ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.