ನಿಶ್ಚಿತಾರ್ಥ ಮುರಿದುಕೊಂಡ ರಾಜಕಾರಣಿ ಭವ್ಯ ಬಿಷ್ಣೋಯಿ, ನಟಿ ಮೆಹ್ರೀನ್ ಪಿರ್ಝಾದಾ

ಮಾಜಿ ಮುಖ್ಯಮಂತ್ರಿಯ ಮೊಮ್ಮಗ ಹಾಗೂ ನಟ, ರಾಜಕಾರಣಿ ಭವ್ಯ ಬಿಷ್ಣೋಯಿ ಅವರೊಂದಿಗೆ ನಡೆದಿದ್ದ ನಿಶ್ಚಿತಾರ್ಥವನ್ನು ಮುರಿದುಕೊಂಡಿರುವುದಾಗಿ ನಟಿ ಮೆಹ್ರೀನ್ ಕೌರ್ ಪಿರ್ಝಾದಾ ಹೇಳಿದ್ದಾರೆ.
ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಸದ್ಯ ಬ್ಯುಸಿಯಾಗಿರುವ ಮೆಹ್ರೀನ್ ಪಿರ್ಝಾದಾ ಇನ್‌ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥ ಮುರಿದುಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಬಿತ್ತು ಎಂಬುದನ್ನು ಅವರು ಹೇಳಿಕೊಂಡಲ್ಲ.
‘ಭವ್ಯ ಬಿಷ್ಣೋಯಿ ಮತ್ತು ನಾನು ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದು, ಮದುವೆ ಅಗದಿರಲು ತೀರ್ಮಾನಿಸಿದ್ದೇವೆ. ನಾವು ಇಬ್ಬರು ಸೇರಿ ನಮ್ಮ ಹಿತಾಸಕ್ತಿ, ಉತ್ತಮ ಭವಿಷ್ಯಕ್ಕಾಗಿ ತೆಗೆದುಕೊಂಡ ಸೌಹಾರ್ದಯುತ ಮತ್ತು ದಿಟ್ಟ ನಿರ್ಧಾರವಾಗಿದೆ ಎಂದು ಮೆಹ್ರೀನ್ ಸ್ಪಷ್ಟನೆ ನೀಡಿದ್ದಾರೆ.
ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಮೆಹ್ರೀನ್ ನಟಿಸದ್ದಾರೆ ಪಟ್ಟಾಸ್, ಅಶ್ವತ್ಥಾಮ, ಚಾಣಕ್ಯ, ಜವಾನ್, ಕವಚಂ, ರಾಜಾ ದಿ ಗ್ರೇಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೆಹ್ರೀನ್ ಪಿರ್ಝಾದಾ ನಟಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಮೆಹ್ರೀನ್ ಪಿರ್ಝಾದಾ ಮತ್ತು ಭವ್ಯ ಬಿಷ್ಣೋಯಿ ಅವರ ನಿಶ್ಚಿತಾರ್ಥ ನೆರವೇರಿತ್ತು. ಭವ್ಯ ಬಿಷ್ಣೋಯಿ ಹರಿಯಾಣ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ. ಕಾಂಗ್ರೆಸ್ ಆಡಳಿತದಲ್ಲಿ ಭಜನ್ ಲಾಲ್ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.