ಶನಿವಾರ, ಸೆಪ್ಟೆಂಬರ್ 25, 2021
22 °C

ಕೊಳದಲ್ಲಿ ಮೌನಿ ರಾಯ್.. ಅಭಿಮಾನಿಗಳ ಮೈಬಿಸಿ ಏರಿಸಿದ ನಟಿ 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ನಟಿ ಮೌನಿ ರಾಯ್ ಸೋಮವಾರ ತಮ್ಮ ಹಾಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ ಅಪ್‌ಡೇಟ್ ಮಾಡಿದ್ದು, ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.

ಸಮುದ್ರ ತೀರ ಮತ್ತು ಸ್ವಿಮಿಂಗ್ ಪೂಲ್‌ನಲ್ಲಿ ಮೋಜು ಮಾಡುತ್ತಿರುವ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಮೌನಿ, ನೀರಿನಲ್ಲಿರುವ ಒಂದು ಸೆಟ್ ಆಫ್ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಮೈಬಿಸಿ ಏರಿಸಿದ್ದಾರೆ.

ಬೂದು ಬಣ್ಣದ ಬಿಕಿನಿಯಲ್ಲಿ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. 

ನಟಿ ವಿದ್ಯಾ ಎಂ ಮಾಳವಡೆ ಅವರು, ‘ನೀರಿನ ಅಪ್ಸರೆ’ ಎಂದು ಕಾಮೆಂಟ್ ಮಾಡಿದರೆ, ನಟಿ ಅದಾ ಖಾನ್ ‘ವೂ ಹೂ’ ಎಂದು ಕಾಮೆಂಟ್ ಹಾಕಿ ಫೈರ್ ಎಮೋಜಿಗಳನ್ನು ಹಾಕಿದ್ದಾರೆ. ಓ ಮೈ ಗಾಡ್ ಎಂದು ಅಭಿಮಾನಿಯೊಬ್ಬರು ಇಣುಕಿದ್ದಾರೆ.

ಅಕ್ಷಯ್ ಕುಮಾರ್ ಅವರ ಗೋಲ್ಡ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಮೌನಿ ರಾಯ್, ಈ ವರ್ಷದ ಆರಂಭದಲ್ಲಿ ದುಬೈ ಕಡಲತೀರದಲ್ಲಿ ತೆಗೆದ ಈ ಚಿತ್ರಗಳೊಂದಿಗೆ ಅಭಿಮಾನಿಗಳ  ಎದೆ ಝಲ್ ಎನಿಸಿದ್ದರು.

ಅವರ ವೃತ್ತಿ ಜೀವನದ ವಿಷಯಕ್ಕೆ ಬಂದರೆ, ಮೌನಿ ರಾಯ್ ಕೊನೆಯದಾಗಿ ಬೈಠೆ ಬೈಠೆ ಎಂಬ ಮ್ಯೂಸಿಕ್ ವಿಡಿಯೋದಲ್ಲಿ ಅಂಗದ್ ಬೇಡಿ ಜೊತೆ ನಟಿಸಿದ್ದರು. ಆಕೆಯ ಲಂಡನ್ ಕಾನ್ಫಿಡೆನ್ಶಿಯಲ್ ಚಿತ್ರ ಕಳೆದ ವರ್ಷ ಸೆಪ್ಟೆಂಬರ್ 18 ರಂದು ಜೀ5 ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು. ಅದಕ್ಕೂ ಮೊದಲು ಮೌನಿ ರಾಯ್ ಮೇಡ್ ಇನ್ ಚೀನಾದಲ್ಲಿ ನಟಿಸಿದ್ದರು. ಇದರಲ್ಲಿ ಅವರು ರಾಜಕುಮಾರ ರಾವ್, ಪರೇಶ್ ರಾವಲ್, ಬೊಮನ್ ಇರಾನಿ, ಗಜರಾಜ್ ರಾವ್ ಮತ್ತು ಸುಮೀತ್ ವ್ಯಾಸ್ ಅವರೊಂದಿಗೆ ಸಕಾಣಿಸಿಕೊಂಡಿದ್ದರು. ಅಯಾನ್ ಮುಖರ್ಜಿಯ ಮುಂದಿನ ಚಿತ್ರ ಬ್ರಹ್ಮಾಸ್ತ್ರದಲ್ಲಿ ಅವರು ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆ ನಟಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು