ಡ್ರಗ್ಸ್ ಮಾಫಿಯಾವು ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ದಿನಕ್ಕೊಂದು ಹೆಸರನ್ನು ಎಳೆದು ತರುತ್ತಿದೆ. ನಟಿ ರಕುಲ್ ಪ್ರೀತ್ ಸಿಂಗ್ ಹೆಸರು ಕೂಡ ಈ ಪ್ರಕರಣದೊಂದಿಗೆ ತಳುಕು ಹಾಕಿಕೊಂಡಿದೆ. ರಿಯಾ ಚಕ್ರವರ್ತಿ ತಮ್ಮ ವಿಚಾರಣೆಯ ವೇಳೆಯ ರಕುಲ್ ಹಾಗೂ ಸಾರಾ ಅಲಿ ಖಾನ್ ಅವರ ಹೆಸರನ್ನು ಬಹಿರಂಗ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಕುಲ್ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದ ದಿನದಿಂದ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಇದರ ಜೊತೆಗೆ ಎನ್ಸಿಬಿ ಅಧಿಕಾರಿಯೊಬ್ಬರು ರಕುಲ್ ಹಾಗೂ ಸಾರಾ ಹೆಸರನ್ನು ರಿಯಾ ಹೇಳಿಲ್ಲ. ಅವರು ಯಾವುದೇ ನಟಿಯರ ಹೆಸರನ್ನೂ ಬಹಿರಂಗ ಪಡಿಸಿಲ್ಲ. ಕೆಲವು ಪೆಡ್ಲರ್ಗಳ ಹೆಸರನ್ನಷ್ಟೇ ಹೇಳಿದ್ದಾರೆ ಎಂದಿದ್ದಾರೆ. ಇದಾದ ನಂತರ ಕೆಲವರು #SorryRakul ಎಂಬ ಟ್ರೆಂಡ್ ಆರಂಭಿಸುವ ಮೂಲಕ ರಕುಲ್ಗೆ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ನಟಿ ಸಮಂತಾ ಕೂಡ ಕೈ ಜೋಡಿಸಿದ್ದರು.

ಇಷ್ಟೆಲ್ಲಾ ವಿಷಯಗಳು ನಡೆದರೂ ರಕುಲ್ ಮಾತ್ರ ಈ ವಿಷಯದ ಕುರಿತು ತುಟಿ ಬಿಚ್ಚಿಲ್ಲ. ತಮ್ಮ ಹೆಸರು ಕೇಳಿ ಬಂದ ದಿನಗಳಿಂದಲೂ ಮೌನ ವಹಿಸಿರುವ ರಕುಲ್ ಸದ್ಯ ಏನೂ ಮಾತನಾಡದೇ ಇರುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಂತಿದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಆಕೆ ಇತ್ತೀಚೆಗೆ ಯಾವುದೇ ಪೋಸ್ಟ್ ಕೂಡ ಹಾಕಿಲ್ಲ. ಆದರೆ ಅವರ ಈ ವರ್ತನೆ ಅಭಿಮಾನಿಗಳನ್ನು ಚಿಂತೆಗೀಡು ಮಾಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಆದರೆ ಮೂಲಗಳ ಪ್ರಕಾರ ರಕುಲ್ ಸದ್ದಿಲ್ಲದೇ ತಮ್ಮ ಶೂಟಿಂಗ್ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

ರಕುಲ್ ಈ ವಿಷಯದ ಕುರಿತು ಮೌನವಾಗಿರುವುದಕ್ಕಿಂತ ಏನಾದರು ಪ್ರತಿಕ್ರಿಯೆ ನೀಡಬೇಕಿತ್ತು. ಮೌನವಾಗಿದ್ದರೆ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.