ಸೋಮವಾರ, ಮಾರ್ಚ್ 27, 2023
33 °C

ಲಾಕ್‌ಡೌನ್‌: ರಕುಲ್‌ ಪ್ರೀತ್, ಸಮಂತಾ ಉದ್ಯಮಕ್ಕೆ ಭಾರೀ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರೋದ್ಯಮದಲ್ಲಿ ಸ್ಟಾರ್‌ ಪಟ್ಟಕ್ಕೇರಿದ ಬಳಿಕ ನಟಿಯರ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗುತ್ತದೆ. ಆಗ ಅವರು ಕೂಡ ಸ್ಟಾರ್ ನಟರ ಹಾದಿಯಲ್ಲಿಯೇ ಸಾಗುತ್ತಾರೆ. ಹಲವು ಉದ್ಯಮಗಳಲ್ಲಿ ಹೇರಳವಾಗಿ ಹಣ ಹೂಡಿಕೆ ಮಾಡುವುದು ಉಂಟು. ಹಣ ದುಪ್ಪಟ್ಟು ಮಾಡಲು ಹೋಗಿ ಹೂಡಿಕೆಯಾದ ಮೊತ್ತವೂ ಕೈಸೇರದೆ ತೊಂದರೆ ಅನುಭವಿಸಿದವರ ಪಟ್ಟಿಯೂ ದೊಡ್ಡದಿದೆ.

ಕೆಲವು ನಟಿಯರು ಹೋಟೆಲ್‌ ಉದ್ಯಮದಲ್ಲಿ ಹಣ ಹೂಡಿದ್ದಾರೆ. ಮತ್ತೆ ಕೆಲವರು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಆದರೆ, ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ರಕುಲ್‌ ಪ್ರೀತ್ ಸಿಂಗ್‌ ಅವರ ಹಾದಿಯೇ ಭಿನ್ನವಾದುದು.

ರಕುಲ್‌ ಪ್ರೀತ್ ಸಿಂಗ್ ಫಿಟ್‌ನೆಟ್‌ ಕ್ಷೇತ್ರದಲ್ಲಿ ಹಣ ಹೂಡಿದ್ದಾರೆ. ಆಕೆ ಎಫ್‌45ಜಿಮ್‌ನ ಪ್ರಾಂಚೈಸಿಯ ಒಡತಿ. ಹೈದರಾಬಾದ್‌ನ ಗಚಿಬೋವ್ಲಿಯಲ್ಲಿ ಜಿಮ್‌ವೊಂದನ್ನು ತೆರೆದಿದ್ದಾರೆ. ಮತ್ತೊಂದು ವಿಶಾಖಪಟ್ಟಣದಲ್ಲಿದೆ.

ಸಮಂತಾ ಅವರದ್ದು ಮತ್ತೊಂದು ಹಾದಿಯ ಪಯಣ. ಕಿಂಗ್‌ಫಿಷರ್‌ ಮಾಡೆಲ್‌ ಶಿಲ್ಪಾ ರೆಡ್ಡಿ ಸೇರಿದಂತೆ ಮತ್ತೊಬ್ಬ ಗೆಳತಿಯೊಟ್ಟಿಗೆ ಸೇರಿ ಆಕೆ ಪ್ಲೇಸ್ಕೂಲ್‌ ನಡೆಸುತ್ತಿದ್ದಾರೆ. ಆದರೆ, ಲಾಕ್‌ಡೌನ್‌ ಪರಿಣಾಮ ಈ ಇಬ್ಬರ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಇದರಿಂದ ನಟಿಯರು ಕಂಗಾಲಾಗಿದ್ದಾರೆ.

ರಕುಲ್‌ ಪ್ರೀತ್ಯ ಜಿಮ್‌ ಮತ್ತು ಸಮಂತಾ ನಡೆಸುತ್ತಿರುವ ಪ್ಲೇಸ್ಕೂಲ್‌ ನಡೆಯುತ್ತಿರುವುದು ಬಾಡಿಗೆ ಕಟ್ಟಡದಲ್ಲಿ. ಹಾಗಾಗಿ, ಕಟ್ಟಡದ ಮಾಲೀಕರು ಕರಾರಿನ ಅನ್ವಯ ಬಾಡಿಗೆ ಹಣ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಹಾಗಾಗಿ, ಈ ಇಬ್ಬರೂ ನಟಿಯರು ತಮ್ಮ ಸ್ವಂತ ಪಾಕೆಟ್‌ನಿಂದಲೇ ಈಗ ಸಿಬ್ಬಂದಿಗೆ ಸಂಬಳ, ಬಾಡಿಗೆ ಪಾವತಿಸಿದ್ದಾರಂತೆ. ಕೊರೊನಾ ಮಹಾಮಾರಿಯು ದೇಶದ ಎಲ್ಲಾ ಉದ್ಯಮಗಳಿಗೂ ಕಂಟಕ ತಂದಿದೆ. ಲಾಕ್‌ಡೌನ್‌ ಅವಧಿ ಪೂರ್ಣಗೊಂಡ ಬಳಿಕ ಉದ್ಯಮ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂಬುದು ನಟಿಯರ ವಿಶ್ವಾಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು