ಹೊಸ ಫೋಟೊ ಹಂಚಿಕೊಂಡ ನಟಿ ಸಮಂತಾ: ಸ್ವಯಂ ಪ್ರೀತಿ, ಪ್ರೇರಣೆಯ ಸಂದೇಶ

ಮುಂಬೈ: ಟಾಲಿವುಡ್‌ನ ಬಹುಬೇಡಿಕೆಯ ನಟಿ ಸಮಂತಾ, ತಮ್ಮ ಬೋಲ್ಡ್ ಲುಕ್‌ನಿಂದಲೇ ಕೋಟ್ಯಂತರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಸಮಂತಾ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಜನವರಿ ತಿಂಗಳಲ್ಲಿನ ಬ್ಯುಸಿ ಲೈಫ್ ಎಂದು ಬಿಳಿ ಹೃದಯದ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ.
ಸದ್ಯ ಸಮಂತಾ ‘ಶಾಕುಂತಲಂ’ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ, ತಮ್ಮ ಮುಂದಿನ ಚಿತ್ರ ‘ಸಿಟಾಡೆಲ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ತೆಲುಗಿನ ಪುಷ್ಪಾ ಸಿನಿಮಾದ "ಊ ಅಂಟಾವ" ಹಾಡಿನ ಸಮಂತಾ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
ಈ ಹಿಂದಿನ ಇನ್‌ಸ್ಟಾಗ್ರಾಮ್ ಪೋಟೊಗಳಲ್ಲಿ ನಟಿ ಸಮಂತಾ ಪೌರಾಣಿಕ ಹಿನ್ನೆಲೆ ಹೊಂದಿರುವ ಶಾಕುಂತಲಂ ಪಾತ್ರದ ಶ್ವೇತ ವರ್ಣದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ನಟಿ ಹೂವಿನ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ.
ಸಮಂತಾ ಮಯೋಸೈಟಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ವಿಚಾರವಾಗಿ ಬಹಳ ನೊಂದಿದ್ದ ನಟಿ, ಕೆಲವರ ಕಮೆಂಟ್‌ಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ತೆಲುಗು ನಟ ನಾಗ ಚೈತನ್ಯರವರಿಂದ ವಿಚ್ಛೇದನ ಪಡೆದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು.
ಇದರ ನಡುವೆ ಸಾಲು ಸಾಲು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮತ್ತೆ ವೃತ್ತಿ ಜೀವನದಲ್ಲಿ ಪುನರಾಗಮನ ಮಾಡಿದ್ದಾರೆ. ಶಾಕುಂತಲಂ ಚಿತ್ರ ಇದೇ ಫೆಬ್ರುವರಿ 17ಕ್ಕೆ ತೆರೆ ಕಾಣಲಿದೆ.
ಇವನ್ನೂ ಓದಿ: ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.