ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2 ವರ್ಷಗಳ ಬಳಿಕ ಮಾಸ್ಕ್ ತೆಗೆದು ಮಾಧ್ಯಮಗಳ ಮುಂದೆ ಬಂದ ಶಿಲ್ಪಾ ಶೆಟ್ಟಿ ಪತಿ

Published : 19 ಅಕ್ಟೋಬರ್ 2023, 5:42 IST
Last Updated : 19 ಅಕ್ಟೋಬರ್ 2023, 5:42 IST
ಫಾಲೋ ಮಾಡಿ
Comments

ಮುಂಬೈ: ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅವರು ಮುಖಕ್ಕೆ ಧರಿಸಿದ್ದ ಮಾಸ್ಕ್‌ಅನ್ನು ಸುಮಾರು ಎರಡು ವರ್ಷಗಳ ಬಳಿಕ ತೆಗೆದು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. 

ಕುಂದ್ರಾ ತಮ್ಮದೇ ಜೀವನಚರಿತ್ರೆಯ ಕುರಿತು ತಯಾರಾದ 'UT 69’ ಎನ್ನುವ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದಾರೆ. ಈ ವೇಳೆ ತಾವು ಧರಿಸಿದ್ದ ಕಪ್ಪು ಬಣ್ಣದ ಮಾಸ್ಕ್‌ ತೆಗೆದಿದ್ದಾರೆ.

ಅಶ್ಲೀಲ ಚಿತ್ರ ನಿರ್ಮಾಣದ ಕುರಿತು ಆರೋಪ ಹೊತ್ತು ಕುಂದ್ರಾ ಹೇಗೆ ಜೈಲು ಸೇರುತ್ತಾರೆ ಎನ್ನುವ ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು, ಶಾನವಾಜ್ ಅಲಿ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.

ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆ ಕುರಿತಾದ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು 2021 ರಲ್ಲಿ ಬಂಧಿಸಿದ್ದರು. ಸುಮಾರು ಎರಡು ತಿಂಗಳ ಕಾಲ ಜೈಲಿನಲ್ಲಿ ಅವರು ಕಳೆದಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದಾಗಿನಿಂದ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಿ ಓಡಾಡುತ್ತಿದ್ದರು.

ಮಾಧ್ಯಮಗಳ ಎದುರು ಮಾಸ್ಕ್‌ ಇಲ್ಲದೆ ಬಂದು ಮಾತನಾಡಿದ ಕುಂದ್ರಾ, ‘ನಾನು ನೋವಿನಿಂದ ಮುಖವಾಡವನ್ನು ಧರಿಸಿದ್ದೇನೆ.  ಕಾನೂನು ವಿಚಾರಣೆಗಿಂತ, ಮಾಧ್ಯಮದ ವಿಚಾರಣೆ ಹೆಚ್ಚು ನೋವು ನೀಡಿದೆ. ನೀವು ನಿಮ್ಮ ಕೆಲಸವನ್ನು ಮಾಡುತ್ತಿದ್ದೀರಿ, ನಿಮ್ಮನ್ನು ದೂಷಿಸುವುದಿಲ್ಲ. ನನ್ನನ್ನು ಯಾರೂ ಗುರುತಿಸದಿರಲಿ ಎಂದು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT