ಸೋಮವಾರ, ಅಕ್ಟೋಬರ್ 18, 2021
24 °C

ಚರ್ಮದ ಸಮಸ್ಯೆಯಿದೆ ಎಂದು ಸಹಜ ಫೋಟೊ ಪೋಸ್ಟ್ ಮಾಡಿದ ಯಾಮಿ ಗೌತಮ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Yami Gautam Instagram Post screenshot

ಬೆಂಗಳೂರು: ಬಾಲಿವುಡ್ ನಟಿ ಯಾಮಿ ಗೌತಮ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಯಾಮಿ ಗೌತಮ್ ಅವರು, ನನಗೆ ’ಕೆರಾಟೊಸಿಸ್-ಪಿಲಾರಿಸ್’ ಎನ್ನುವ ಚರ್ಮದ ಸಮಸ್ಯೆಯಿದೆ. ಮೊದಲು ಆ ಬಗ್ಗೆ ಹೇಳಿಕೊಳ್ಳಲು ನನಗೆ ಮುಜುಗರವಾಗುತ್ತಿತ್ತು. ಇದು ನನ್ನ ಹದಿಹರೆಯದಿಂದಲೂ ಇದ್ದು, ಅದಕ್ಕೆ ಸೂಕ್ತ ಪರಿಹಾರವಿಲ್ಲ. ಹಾಗೆಂದು ನನಗೆ ಬೇಸರವಿಲ್ಲ, ಇಂತಹ ಸಮಸ್ಯೆಗಳು ಹಲವರಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಂದು ಕುಗ್ಗಬೇಕಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜತೆಗೆ ಯಾಮಿ ಗೌತಮ್, ಎಡಿಟ್ ಮಾಡದ ಸಹಜ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಯಂತಹ ರಚನೆಗಳು ಸೃಷ್ಟಿಯಾಗುತ್ತವೆ. ಆದರೆ ಅದರಿಂದ ಸಮಸ್ಯೆಯೇನಿಲ್ಲ, ಅದಕ್ಕಾಗಿ ಚಿಂತೆ ಮಾಡಬೇಡಿ ಎಂದಿದ್ದಾರೆ.

ಯಾಮಿ ಗೌತಮ್ ಅವರ ಈ ಪೋಸ್ಟ್‌ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಚರ್ಮ ಮತ್ತು ಸಹಜ ಸೌಂದರ್ಯ ಕುರಿತಂತೆ ಕೀಳರಿಮೆ ಬೆಳೆಸಿಕೊಳ್ಳಬಾರದು ಎಂಬ ಸಲಹೆ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು