ಗುರುವಾರ , ಸೆಪ್ಟೆಂಬರ್ 23, 2021
25 °C

ಇನ್ನೈದು ತಿಂಗಳು ನಿಲ್ಲುವಂತಿಲ್ಲ.. ನಡೆಯುವಂತಿಲ್ಲ!: ನೋವು ಬಿಚ್ಚಿಟ್ಟ ನಟಿ ಯಶಿಕಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Yashika Aanand Instagram

ಬೆಂಗಳೂರು: ನಾನಿನ್ನು ಕನಿಷ್ಠ ಐದು ತಿಂಗಳು ನಡೆದಾಡುವಂತಿಲ್ಲ, ಸರಿಯಾಗಿ ಎದ್ದು ನಿಲ್ಲುವಂತಿಲ್ಲ.. ಅಷ್ಟೊಂದು ಗಾಯಗಳಾಗಿದ್ದು, ಚೇತರಿಸಿಕೊಳ್ಳಬೇಕಿದೆ ಎಂದು ನಟಿ ಯಶಿಕಾ ಆನಂದ್ ಹೇಳಿದ್ದಾರೆ.

ದಕ್ಷಿಣ ಚಿತ್ರರಂಗದ ನಟಿ ಯಶಿಕಾ ಆನಂದ್ ಅವರ ಕಾರು ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಜುಲೈ 24ರಂದು ಅಪಘಾತಕ್ಕೆ ಈಡಾಗಿತ್ತು. ವೇಗದಲ್ಲಿ ಸಾಗುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಮಗುಚಿಬಿದ್ದಿತ್ತು. ಕಾರಿನಲ್ಲಿ ಯಶಿಕಾ ಜತೆಯಿದ್ದ ಅವರ ಗೆಳತಿ ಸಾವನ್ನಪ್ಪಿದ್ದರು. ಅದಾದ ಬಳಿಕ ನಟಿ ಯಶಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ನಟಿ ಯಶಿಕಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ನಾನೀಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಗಾಯಗೊಂಡಿದ್ದೇನೆ. ಬೆನ್ನಿನ ಮೂಳೆ ಮತ್ತು ಬಲಗಾಲು ಸರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದೇನೆ, ಏನಿಲ್ಲವೆಂದರೂ, ಕನಿಷ್ಠ ಐದು ತಿಂಗಳು ಬೆಡ್‌ನಲ್ಲಿಯೇ ಇರಬೇಕಾದ ಸ್ಥಿತಿ ಎದುರಾಗಿದೆ. ಇದೊಂದು ಪುನರ್ಜನ್ಮವೇ ಆಗಿದೆ ಎಂದು ಹೇಳಿದ್ದು, ಗೆಳತಿಯನ್ನು ಕಳೆದುಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು