ಆದಿಪುರುಷ್: ಶೂಟಿಂಗ್ ಮುಗಿಸಿದ ಪ್ರಭಾಸ್

ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ನಿರ್ದೇಶನದ ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಶೂಟಿಂಗ್ ಮುಕ್ತಾಯದ ಹಂತಕ್ಕೆ ತಲುಪಿದ್ದು, ನಟ ಪ್ರಭಾಸ್ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ ಎಂದು ಚಿತ್ರತಂಡ ಹೇಳಿದೆ.
ಈ ಸಿನಿಮಾದ 100ನೇ ದಿನದ ಚಿತ್ರೀಕರಣ ಹಾಗೂ ಪ್ರಭಾಸ್ ಭಾಗದ ಶೂಟಿಂಗ್ ಮುಕ್ತಾಯವಾದ ಸಂದರ್ಭದಲ್ಲಿ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿತ್ತು. ಓಂ ರಾವತ್ ಅವರು ಪ್ರಭಾಸ್‌ಗೆ ಕೇಕ್ ತಿನ್ನಿಸಿದ್ದರು. ಈ ಫೋಟೊಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಸದ್ಯ ಪ್ರಭಾಸ್ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದಿಪುರುಷ್ ಶೂಟಿಂಗ್ ಮುಕ್ತಾಯವಾಗಿರುವುದರಿಂದ ಸಲಾರ್, ಇನ್ನು ಹೆಸರಿಡದ ಎರಡು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಧೆ–ಶ್ಯಾಮಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
Last day, last shot and tons of amazing memories but the journey is not over yet!
See you soon darling #Prabhas#Adipurush #AboutLastNight pic.twitter.com/rtB7KahopK
— Om Raut (@omraut) November 4, 2021
ರಾಮಾಯಣ ಆಧಾರಿತ ಆದಿಪುರುಷ್ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದು ಈ ಚಿತ್ರ 2022ರ ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಆದಿಪುರುಷ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಟಿ ಸೀರೀಸ್ ಪ್ರೊಡಕ್ಸನ್ ಕಂಪನಿ ಈ ಚಿತ್ರವನ್ನು ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸಿನಿಮಾ ನಿರ್ದೇಶಿಸಿದ್ದ ಓಂ ರಾವುತ್ ‘ಆದಿಪುರುಷ್’ ನಿರ್ದೇಶನ ಮಾಡುತ್ತಿದ್ದಾರೆ.
ಆದಿಪುರುಷ್ 3ಡಿ ಯಲ್ಲಿ ಮೂಡಿಬರಲಿದ್ದು, ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ಅಭಿನಯಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.