ಬುಧವಾರ, ಆಗಸ್ಟ್ 17, 2022
28 °C

‘ಶುಗರ್ ಫ್ಯಾಕ್ಟರಿ’ ಆಕರ್ಷಣೆ ಹೆಚ್ಚಿಸಿದ ಗ್ಲಾಮರ್ ಬೆಡಗಿ ಅದ್ವಿತಿ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ‌ ಅಮೂಲ್ಯ ‌ಸೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರಕ್ಕೆ ನಾಯಕಿಯಾಗಿ ಕರಾವಳಿಯ ಮತ್ತೊಬ್ಬ ‘ಗ್ಲಾಮರ್‌ ಬೊಂಬೆ’ ಅದ್ವಿತಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಲವ್‌, ರೊಮ್ಯಾಂಟಿಕ್‌ ಕಥಾಹಂದರದ ‘ಶುಗರ್‌ ಫ್ಯಾಕ್ಟರಿ’ ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಮೊದಲ ನಾಯಕಿ ಕುಡ್ಲದ ಚೆಲುವೆ ಸೋನಲ್ ಮೊಂತೆರೊ. ಎರಡನೇ ನಾಯಕಿಯಾಗಿ ಅದ್ವಿತಿ ಶೆಟ್ಟಿ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಮೂರನೇ ನಾಯಕಿ ಯಾರೆನ್ನುವ ಕುತೂಹಲವನ್ನು ಚಿತ್ರತಂಡ ಸದ್ಯಕ್ಕೆ ಕಾಯ್ದುಕೊಂಡಿದೆ. 

‘ಡಾರ್ಲಿಂಗ್‌ ಕೃಷ್ಣ ನಾಯಕರಾಗಿರುವ ‘ಶುಗರ್‌ ಫ್ಯಾಕ್ಟರಿ’ಯ ಭಾಗವಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಜನವರಿಯಿಂದ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿರುವೆ. ಇದೊಂದು ರೊಮ್ಯಾಂಟಿಕ್‌ ಕಥೆಯ ಚಿತ್ರ. ಎಲ್ಲರೂ ಈ ಚಿತ್ರವನ್ನು ನೋಡಿ ತುಂಬಾ ಎಂಜಾಯ್‌ ಮಾಡಲಿದ್ದೀರಿ. ಸದ್ಯ ನಾನು ಅಭಿನಯಿಸುತ್ತಿರುವ ‘ಧೀರ ಸಾಮ್ರಾಟ್‌’ ಚಿತ್ರ ಮುಗಿಯುತ್ತಾ ಬಂದಿದ್ದು, ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ನನ್ನ ಮತ್ತೆರಡು ಹೊಸ ಸಿನಿಮಾಗಳು ಸದ್ಯದಲ್ಲೇ ಶುರುವಾಗುತ್ತಿವೆ. ಇದರಲ್ಲಿ ಒಂದು ಚಿತ್ರದಲ್ಲಿ ಡಾಕ್ಟರ್‌ ಪಾತ್ರ ನಿರ್ವಹಿಸುತ್ತಿದ್ದೇನೆ’ ಎಂದು ಅದ್ವಿತಿ ಶೆಟ್ಟಿ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ಹಿಂದೆ ‘ಮನಸಾಲಜಿ’ ಚಿತ್ರ ನಿರ್ದೇಶಿಸಿದ್ದ ದೀಪಕ್ ಅರಸ್‌ಗೆ ಇದು ಎರಡನೇ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಇವರೇ ಹೆಣೆದಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಗೋವಾ, ಮೈಸೂರು ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ನಡೆಸುವುದು ಚಿತ್ರ ತಂಡದ ಯೋಜನೆ.

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್. ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ , ಕಬೀರ್ ರಫಿ ಸಂಗೀತ ನಿರ್ದೇಶನ, ಸಂಭಾಷಣೆ ‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್ ಅವರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು