ಬುಧವಾರ, ಮೇ 25, 2022
27 °C

Panama Papers: ಇ.ಡಿ ವಿಚಾರಣೆಗೆ ಹಾಜರಾದ ಐಶ್ವರ್ಯ ರೈ ಬಚ್ಚನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಸೋಮವಾರ ವಿಚಾರಣೆಗೆ ಹಾಜರಾದರು ಎಂದು ಸುದ್ದಿಸಂಸ್ಥೆ ‘ಪಿಟಿಐ‘ ವರದಿ ಮಾಡಿದೆ

ಐಶ್ವರ್ಯಾ ರೈ ಅವರಿಗೆ ಈಗಾಗಲೇ ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮೂರನೇ ಬಾರಿ ಸಮನ್ಸ್‌ ಜಾರಿ ಮಾಡಲಾಗಿತ್ತು. 

‘ಪನಾಮಾ ಪೇಪರ್ಸ್‌’ ಬಹಿರಂಗಪಡಿಸಿದ ಪಟ್ಟಿಯಲ್ಲಿ ಅಮಿತಾಭ್‌, ಐಶ್ವರ್ಯ ಸೇರಿದಂತೆ 500 ಭಾರತೀಯರ ಹೆಸರುಗಳಿವೆ.

ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಐಶ್ವರ್ಯ ಅವರು, ‘ಪನಾಮಾ ಪಟ್ಟಿಯಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರು ಇರುವುದನ್ನು ಸಂಪೂರ್ಣ ಸುಳ್ಳು’ ಎಂದು ತಿಳಿಸಿದ್ದರು.  

ಇದನ್ನೂ ಓದಿ– ಪನಾಮಾ ಪೇಪರ್ಸ್: ಐಶ್ವರ್ಯಾ ರೈ ಬಚ್ಚನ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು