ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಬ್ ಡ್ರೈವರ್‌ ಗೆಟಪ್‌ನಲ್ಲಿ ಐಶ್ವರ್ಯಾ ರಾಜೇಶ್: ಡ್ರೈವರ್ ಜಮುನಾ ಟ್ರೈಲರ್

Last Updated 10 ಜುಲೈ 2022, 9:02 IST
ಅಕ್ಷರ ಗಾತ್ರ

ವಿಶಿಷ್ಟ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಮನೆ ಮಾತಾಗಿರುವ ನಟಿ ಐಶ್ವರ್ಯಾ ರಾಜೇಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಡ್ರೈವರ್ ಜಮುನಾ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು, ಮಹಿಳೆ ಡ್ರೈವರ್ ವೃತ್ತಿಗೆ ಇಳಿದಾಗ ಆಕೆ ಎದುರಿಸುವ ಸವಾಲುಗಳನ್ನು ಇಡೀ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಕನ್ನಡದಲ್ಲಿ ಈ ಟ್ರೇಲರನ್ನು ಬಹುಭಾಷಾ ನಟ ಕಿಶೋರ್ ಬಿಡುಗಡೆ ಮಾಡಿದರು.

'ವತ್ತಿಕುಚ್ಚಿ’ ಸಿನಿಮಾ ಖ್ಯಾತಿಯ ಪಾ.ಕನ್ಸ್ಲಿನ್ ನಿರ್ದೇಶನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಐಶ್ವರ್ಯಾ ರಾಜೇಶ್ ಕ್ಯಾಬ್ ಡ್ರೈವರ್ ಆಗಿ ಬಣ್ಣ ಹಚ್ಚಿದ್ದಾರೆ. ತಾರಾಬಳಗದಲ್ಲಿ ಆಡುಕಳಂ ನರೇನ್, ಶ್ರೀ ರಂಜನಿ, ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ ಅಭಿಷೇಕ್, ‘ರಾಜಾ ರಾಣಿ’ ಸಿನಿಮಾ ಖ್ಯಾತಿಯ ಪಾಂಡಿಯನ್, ಕವಿತಾ ಭಾರತಿ, ಮಣಿಕಂದನ್, ರಾಜೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಗೋಕುಲ್ ಬೆನೊಯ್ ಛಾಯಾಗ್ರಹಣ, ಗಿಬ್ರಾನ್ ಸಂಗೀತ ಜವಾಬ್ದಾರಿ ಹೊತ್ತುಕೊಂಡಿದ್ದು, ಎಸ್.ಪಿ.ಚೌದರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಡ್ರೈವರ್ ಜಮುನಾ’ ಪಾತ್ರಕ್ಕಾಗಿ ಐಶ್ವರ್ಯಾ ಕ್ಯಾಬ್ ಡ್ರೈವರ್ ಮಹಿಳೆಯರನ್ನು ಭೇಟಿ ಮಾಡಿ ಅವರ ಹಾವ-ಭಾವವನ್ನು ಅಳವಡಿಸಿಕೊಂಡಿದ್ದಾರೆ. ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT