ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್. ಮಾಧವನ್‌, ಜ್ಯೋತಿಕಾ, ಅಜಯ್‌ ದೇವಗನ್‌ ಅಭಿನಯದ ಚಿತ್ರ ಮುಂದಿನ ವರ್ಷ ತೆರೆಗೆ

Published 7 ಸೆಪ್ಟೆಂಬರ್ 2023, 14:05 IST
Last Updated 7 ಸೆಪ್ಟೆಂಬರ್ 2023, 14:05 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಅಜಯ್‌ ದೇವಗನ್‌, ಆರ್‌. ಮಾಧವನ್‌ ಹಾಗೂ ನಟಿ ಜ್ಯೋತಿಕಾ ಅವರ ಸೂಪರ್ ನ್ಯಾಚುರಲ್ ಕಥಧಾರಿತ ಚಿತ್ರ 2024 ಮಾರ್ಚ್ 8ರಂದು ದೇಶಾದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕರು ತಿಳಿಸಿದ್ದಾರೆ.

ಸೂಪರ್ 30, ಕ್ವೀನ್‌ ಅಂಡ್ ಗುಡ್‌ ಬೈ ಮುಂತಾದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ಮಾಪಕ ವಿಕಾಸ್‌ ಬಹ್ಲ್‌ ನಿರ್ದೇಶಿಸಿದ್ದು, ಇನ್ನೂ ಈ ಚಿತ್ರಕ್ಕೆ ಹೆಸರಿಡಲಾಗಿಲ್ಲ.

ಅಜಯ್‌ ದೇವಗನ್‌ ಅವರ ನಿರ್ಮಾಣ ಸಂಸ್ಥೆ ಅಜಯ್‌ ದೇವಗನ್‌ ಎಫ್‌ ಫಿಲ್ಮ್ಸ್‌ ಚಿತ್ರದ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

‘ಚಲನಚಿತ್ರದಲ್ಲಿನ ವಿಷಯಗಳು ಅಲೌಕಿಕ ತಿರುವು ಪಡೆದುಕೊಳ್ಳಲಿವೆ. ವಿಕಾಸ್‌ ಬಹ್ಲ್‌ ನಿರ್ದೇಶನ ಮಾಡಿರುವ ಜನರನ್ನು ಬೆಚ್ಚಿ ಬೀಳಿಸುವ ಥ್ರಿಲ್ಲರ್‌ ಚಿತ್ರಕ್ಕೆ ಅಜಯ್‌ ದೇವಗನ್‌, ಆರ್‌. ಮಾಧವನ್‌ ಮತ್ತು ಜ್ಯೋತಿಕಾ ಮೂವರು ಸಾಕ್ಷಿಯಾಗಿದ್ದಾರೆ. ಚಿತ್ರವು 2024 ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಈ ಚಿತ್ರದ ಮೂಲಕ ಜ್ಯೋತಿಕಾ ಅವರು 25 ವರ್ಷಗಳ ನಂತರ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. 1997ರಲ್ಲಿ ಪ್ರಿಯದರ್ಶನ್‌ ನಿರ್ದೇಶನದ ‘ಡೋಲಿ ಸಾಜಾ ಕೆ ರಖ್ನಾ’ ಜ್ಯೋತಿಕಾ ಅವರ ಕೊನೆಯ ಹಿಂದಿ ಚಿತ್ರವಾಗಿತ್ತು. ಹಾಗೆಯೇ ಬಾಲಿವುಡ್‌ನಲ್ಲಿ ಆಕೆಯ ಚೊಚ್ಚಲ ಚಿತ್ರ ಇದಾಗಿದೆ.

ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್‌, ಅಜಯ್‌ ದೇವಗನ್‌ ಎಫ್‌ ಫಿಲ್ಮ್ಸ್‌ ಮತ್ತು ಪನೋರಮಾ ಸ್ಟುಡಿಯೋಸ್‌ ಇಂಟರ್‌ನ್ಯಾಷನಲ್‌ ಪ್ರಸುತ್ತಪಡಿಸಿದ್ದು, ದೇವಗನ್‌, ಜ್ಯೋತಿ ದೇಶಪಾಂಡೆ, ಕುಮಾರ್ ಮಂಗತ್‌ ಪಾಠಕ್‌ ಹಾಗೂ ಅಭಿಷೇಕ್‌ ಪಾಠಕ್‌ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT