ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ತಲಾ ಅಜಿತ್‌' ಮಿದುಳು ಸರ್ಜರಿಗೆ ಒಳಗಾಗಿರುವುದು ಸುಳ್ಳು: ವಕ್ತಾರರು

Published 9 ಮಾರ್ಚ್ 2024, 3:09 IST
Last Updated 9 ಮಾರ್ಚ್ 2024, 3:09 IST
ಅಕ್ಷರ ಗಾತ್ರ

ಚೆನ್ನೈ: ತಮಿಳಿನ ಖ್ಯಾತ ನಟ ತಲಾ ಅಜಿತ್‌ ಕುಮಾರ್‌ ಮಿದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದು ಸುಳ್ಳು ಎಂದು ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರ ವಕ್ತಾರರು, ಅಜಿತ್‌ಗೆ ಸರ್ಜರಿ ಆಗಿರುವುದು ಹಾಗೂ ಮಿದುಳಿನಲ್ಲಿ ಗುಳ್ಳೆಗಳಾಗಿರುವುದು ಸುಳ್ಳು ಎಂದು ಹೇಳಿದ್ದಾರೆ. 

‘ಅಜಿತ್ ಸಾಮಾನ್ಯ ಪರೀಕ್ಷೆಗಾಗಿ ಗುರುವಾರ ಆಸ್ಪತ್ರೆಗೆ ತೆರಳಿದ್ದರು. ಮಿದುಳು ಹಾಗೂ ಕಿವಿಗೆ ಕನೆಕ್ಟ್ ಆಗಿರುವ ಒಂದು ನರದಲ್ಲಿ ಸಣ್ಣ ಊತ ಇತ್ತು. ಅದನ್ನು ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆ ಮೂಲಕ ಪರಿಹರಿಸಿದ್ದಾರೆ. ಯಾವುದೇ ಸರ್ಜರಿ ಮಾಡಿಲ್ಲ, ಅಜಿತ್ ಆರೋಗ್ಯವಾಗಿದ್ದಾರೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. 

ಸದ್ಯ ಅಜಿತ್‌ ‘ವಿದಾ ಮುಯರಾಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಕುಟುಂಬದ ಜೊತೆ ಸಮಯ ಕಳೆಯಲು ಭಾರತಕ್ಕೆ ಬಂದಿದ್ದಾರೆ. ಈ ವೇಳೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ವಕ್ತಾರರು ಹೇಳಿದ ಮಾತುಗಳನ್ನು ಉಲ್ಲೇಖಿಸಿ ತಮಿಳು ಮಾಧ್ಯಮಗಳು ವರದಿ ಮಾಡಿವೆ. 

ಅಜಿತ್‌ ಮಿದುಳಿನಲ್ಲಿ ಗುಳ್ಳೆಗಳಾಗಿದ್ದು ಅವರಿಗೆ ಸರ್ಜರಿ ಆಗಿದೆ. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಶುಕ್ರವಾರ ತಮಿಳು ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.

‘ವಿದಾ ಮುಯರಾಚಿ’ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಮುಗಿಳ್‌ ತಿರುಮೇನಿ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದಲ್ಲಿ  ತ್ರಿಶಾ, ಅರ್ಜುನ್ ಸರ್ಜಾ, ರೆಜಿನಾ ಮುಂತಾದವರು ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT