ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಷಯ್‌ ಕುಮಾರ್‌ಗೆ 57ನೇ ಹುಟ್ಟುಹಬ್ಬ:‘ಭೂತ್ ಬಂಗ್ಲಾ’ದ ಫಸ್ಟ್‌ ಲುಕ್‌ ಬಿಡುಗಡೆ

Published : 9 ಸೆಪ್ಟೆಂಬರ್ 2024, 7:46 IST
Last Updated : 9 ಸೆಪ್ಟೆಂಬರ್ 2024, 7:46 IST
ಫಾಲೋ ಮಾಡಿ
Comments

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ. ಮುಂಬರುವ ಅವರ ‘ಭೂತ್ ಬಂಗ್ಲಾ‘ ಚಿತ್ರದ ಫಸ್ಟ್‌ ಲುಕ್‌ ಅನ್ನು ಬಿಡುಗಡೆ ಮಾಡುವುದರ ಮೂಲಕ ಚಿತ್ರತಂಡ ಶುಭಕೋರಿದೆ.

14 ವರ್ಷಗಳ ಬಳಿಕ ಹಾರರ್‌ ಮತ್ತು ಹಾಸ್ಯ ಪ್ರಧಾನ ‘ಭೂತ್ ಬಂಗ್ಲಾ’ ಚಿತ್ರದ ಮೂಲಕ ನಿರ್ದೇಶಕ ಪ್ರಿಯದರ್ಶನ್ ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಕ್ಷಯ್‌‘ 2010ರಲ್ಲಿ ತೆರೆಕಂಡ ‘ಖಟ್ಟಾ ಮೀಠಾ‘ದಲ್ಲಿ ಪ್ರಿಯದರ್ಶನ್ ಜತೆಗೆ ಕೆಲಸ ಮಾಡಿದ್ದೆ. 14 ವರ್ಷಗಳ ಬಳಿಕ ಮತ್ತೆ ಅವರೊಂದಿಗೆ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ. ತೆರೆ ಮೇಲೆ ಈ ಚಿತ್ರ ಮ್ಯಾಜಿಕ್‌ ಮಾಡಲಿದೆ ನಿರೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಮತ್ತು ಪ್ರಿಯದರ್ಶನ್, 'ಹೇರಾ ಫೇರಿ', 'ಗರಂ ಮಸಾಲಾ', 'ಭೂಲ್ ಭುಲೈಯಾ', 'ದೇ ದನಾ ದಾನ್', ಮತ್ತು 'ಭಾಗಂ ಭಾಗ್' ನಂತಹ ಹಲವಾರು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, 2025ಕ್ಕೆ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT