‘ಪ್ಯಾಡ್ಮ್ಯಾನ್’, ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಕೇಸರಿ’, ‘ಮಿಷನ್ ಮಂಗಲ’ ಮುಂತಾದ ಸಾಮಾಜಿಕ ಕಳಕಳಿ ಮತ್ತು ಸಂದೇಶಗಳಿರುವ ಚಿತ್ರಗಳಲ್ಲಿಯೇ ನಟಿಸುತ್ತಿರುವ ಅಕ್ಷಯ್ ಕುಮಾರ್ಗೆ ಇದುವರೆಗೂ ಯಾಕೆ ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿಲ್ಲ ಎಂಬ ಬಹಳ ದಿನಗಳ ಕುತೂಹಲಕ್ಕೆ ಸ್ವತಃ ಅಕ್ಷಯ್ ತೆರೆ ಎಳೆದಿದ್ದಾರೆ.

ಇರ್ಫಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಐಶ್ಚರ್ಯಾ ರೈ, ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವಾಗಅಕ್ಷಯ್ ಏಕೆ ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿಲ್ಲ ಎಂದು ಅಭಿಮಾನಿಗಳು ಕೇಳುತ್ತಿದ್ದರು.

‘ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ನನಗೆ ಇದುವರೆಗೂ ಹೇಳಿಕೊಳ್ಳುವಂತಹ ಆಫರ್ ಬಂದಿಲ್ಲ. ಬಂದ ಒಂದೆರೆಡು ಅವಕಾಶಗಳು ಕೂಡ ಹೇಳಿಕೊಳ್ಳುವ ಹಾಗಿರಲಿಲ್ಲ’ ಎಂದು ಅಕ್ಷಯ್ ಈಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

‘ಹೌಸ್ಫುಲ್–4’, ‘ಗುಡ್ನ್ಯೂಸ್’, ‘ಸೂರ್ಯವಂಶಿ’, ‘ಲಕ್ಷ್ಮಿ ಬಾಂಬ್’ನಂತಹ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿರುವ ಅಕ್ಷಯ್ ಕುಮಾರ್, ‘ಈಗ ನೆಮ್ಮದಿಯಾಗಿದ್ದೇನೆ.ಸದ್ಯ ಬಾಲಿವುಡ್ ಚಿತ್ರಗಳೇ ಸಾಕು’ ಎಂದಿದ್ದಾರೆ. ಹಾಲಿವುಡ್ನಲ್ಲಿ ತಮ್ಮ ಪ್ರತಿಭೆಗೆ ತಕ್ಕ ಒಳ್ಳೆಯ ಅವಕಾಶ ದೊರೆತರೆ ಖಂಡಿತಾ ಅಭಿನಯಿಸಲು ಸಿದ್ಧ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.