ಸೋಮವಾರ, ಆಗಸ್ಟ್ 2, 2021
28 °C

ಬೆಲ್‌ಬಾಟಂ: ಅಕ್ಷಯ್‌ ಜೊತೆ ವಾಣಿಕಪೂರ್‌ ರೊಮ್ಯಾನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ನಟ ಅಕ್ಷಯ್‌ ಕುಮಾರ್‌ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಬೆಲ್‌ಬಾಟಂ’ಗೆ ನಟಿ ವಾಣಿ ಕಪೂರ್‌ ನಾಯಕಿ. ಈ ಚಿತ್ರವು ಮುಂದಿನ ವರ್ಷ ಏಪ್ರಿಲ್‌ 2 ರಂದು ಬಿಡುಗಡೆಯಾಗಲಿದೆ.  

ಈ ವಿಚಾರವನ್ನು ಸ್ವತಃ ವಾಣಿಕಪೂರ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ಸೂಪರ್ ಸೂಪರ್‌ ಥ್ರಿಲ್‌ ಹಾಗೂ ಎಕ್ಸೈಟ್‌ ಆಗಿದ್ದೇನೆ. ಅಕ್ಷಯ್‌ ಕುಮಾರ್‌ ಜೊತೆ ನಟಿಸುತ್ತಿದ್ದೇನೆ. ‘ಬೆಲ್‌ಬಾಟಂ’ ಚಿತ್ರೀಕರಣ ಆರಂಭಕ್ಕೆ ಕಾಯುತ್ತಿದ್ದೇನೆ’ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. 

ವಾಣಿ ಕಪೂರ್‌ ‘ಶುದ್ಧ್‌ ದೇಸಿ ರೊಮ್ಯಾನ್ಸ್‌’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು. ಇದರಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ನಟನೆಗೆ ಅವರಿಗೆ ‘ಬೆಸ್ಟ್‌ ಫಿಮೇಲ್‌ ಡಿಬೇಟ್‌’ ಫಿಲಂಫೇರ್‌ ಪ್ರಶಸ್ತಿ ಬಂದಿತ್ತು.  ನಂತರ ರಣವೀರ್‌ ಸಿಂಗ್‌ ಜೊತೆ ‘ಬೇಫಿಕ್ರೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಹೃತಿಕ್‌ ರೋಷನ್‌ ಜೊತೆ ‘ವಾರ್‌’ ಚಿತ್ರದಲ್ಲೂ ಅಭಿನಯಿಸಿದ್ದರು. 

ಇದೇ ಮೊದಲ ಬಾರಿಗೆ ವಾಣಿಕಪೂರ್‌ ಹಾಗೂ ಅಕ್ಷಯ್‌ಕುಮಾರ್‌ ಒಟ್ಟಿಗೆ ನಟಿಸುತ್ತಿರುವುದು. ಈ ಚಿತ್ರವನ್ನು ನಿಖಿಲ್‌ ಅಡ್ವಾಣಿ ನಿರ್ದೇಶಿಸುತ್ತಿದ್ದಾರೆ. ವಶು ಭಗ್ನನಿ, ಜಾಕಿ ಭಗ್ನಾನಿ, ದೀಪ್‌ಶಿಖಾ ದೇಶ್‌ಮುಖ್‌ , ಮೊನೀಶಾ ಅಡ್ವಾಣಿ ಬಂಡವಾಳ ಹೂಡಿದ್ದಾರೆ. ಈ ಚಿತ್ರವು ಜೂನ್‌– ಜುಲೈ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಬೇಕಿತ್ತು. ಆದ್ರೆ ಕೊರೊನಾ ವೈರಸ್‌ ಸಾಂಕ್ರಾಮಿಕ ಭಯದಿಂದ ಮುಂದೂಡಲಾಗಿದೆ. 

‘ಬೆಲ್‌ಬಾಟಂ’ ಚಿತ್ರದ ಮೊದಲ ಪೋಸ್ಟರ್‌ನ್ನು ಚಿತ್ರತಂಡ ಕಳೆದ ನವೆಂಬರ್‌ ತಿಂಗಳಲ್ಲಿ ಹಂಚಿಕೊಂಡಿತ್ತು. ಕೆಂಪು ಕಾರಿನ ಮುಂದೆ ಬೆಲ್‌ಬಾಟಂ ಉಡುಪು ಧರಿಸಿ ನಿಂತಿದ್ದ ಅಕ್ಷಯ್‌ ಭಂಗಿ ಅವರ ಅಭಿಮಾನಿಗಳನ್ನು ರೆಟ್ರೊ ನೆನ‍ಪುಗಳನ್ನು ಮರುಕಳಿಸುವಂತೆ ಮಾಡಿತ್ತು. 

ಈ ಚಿತ್ರ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅದೇ ದಿನ ಅಕ್ಷಯ್‌ ಅಭಿನಯದ ಮತ್ತೊಂದು ಚಿತ್ರ ‘ಬಚ್ಚನ್‌ ಪಾಂಡೆ’ ಬಿಡುಗಡೆಯಗುತ್ತಿರುವುದರಿಂದ ‘ಬೆಲ್‌ಬಾಟಂ’ ಚಿತ್ರದ ಬಿಡುಗಡೆಯನ್ನು ಏಪ್ರಿಲ್‌ವರೆಗೆ ಮುಂದೂಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು