ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನಗಳಲ್ಲಿ ₹35 ಕೋಟಿ ಗಳಿಸಿದ ‘ರಾಮಸೇತು’,‘ಥ್ಯಾಂಕ್ ಗಾಡ್’ಗಳಿಕೆ ₹18 ಕೋಟಿ

Last Updated 28 ಅಕ್ಟೋಬರ್ 2022, 11:13 IST
ಅಕ್ಷರ ಗಾತ್ರ

ಮುಂಬೈ: ಅಕ್ಟೋಬರ್ 25ರಂದು ತೆರೆ ಕಂಡ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ ರಾಮಸೇತು ಮತ್ತು ಅಜಯ್ ದೇವಗನ್ ಅವರ ‘ಥ್ಯಾಂಕ್ ಗಾಡ್’ ಚಿತ್ರಗಳು 3 ದಿನಗಳಲ್ಲಿ ಕ್ರಮವಾಗಿ ₹35.40 ಕೋಟಿ ಮತ್ತು ₹18.25 ಕೋಟಿ ಗಳಿಕೆ ಕಂಡಿವೆ.

ಸಿನಿಮಾಗಳ ವಹಿವಾಟು ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮೂಲಕ ಈ ಚಿತ್ರಗಳ ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ನಗರ ಪ್ರದೇಶಗಳಲ್ಲಿ ರಾಮ್ ಸೇತು ಉತ್ತಮವಾಗಿ ಗಳಿಕೆ ಕಂಡಿದೆ. ಮಂಗಳವಾರ ₹15.25 ಕೋಟಿ, ಬುಧವಾರ ₹11.40 ಕೋಟಿ ಹಾಗೂ ಗುರುವಾರ ₹8.75 ಕೋಟಿ ಸೇರಿ ಒಟ್ಟು ₹ 35.40 ಕೋಟಿ ಗಳಿಕೆ ಕಂಡಿದೆ.

ಸತ್ಯದೇವ್‌, ಜಾಕ್ವೆಲಿನ್ ಫರ್ನಾಂಡೀಸ್, ನುಸ್ರತ್‌ ಭರುಚ ಮೊದಲಾದವರು ಚಿತ್ರದಲ್ಲಿದ್ದಾರೆ. ಅಕ್ಷಯ್‌ ಕುಮಾರ್‌ ಪುರಾತತ್ವ ಶಾಸ್ತ್ರಜ್ಞರಾಗಿ ಪಾತ್ರ ನಿರ್ವಹಿಸಿದ್ದಾರೆ. ಹನುಮಂತ ಸೀತೆಯನ್ನು ಕರೆತರಲು ಲಂಕೆಗೆ ಹೊರಟ ರಾಮನಿಗಾಗಿ ಕಲ್ಲುಗಳಿಂದ ಸೇತುವೆ ನಿರ್ಮಿಸಿದ್ದ ಎಂಬ ಕಥೆಯಿದೆ. ಭಾರತ–ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಈ ಸೇತುವೆ ಇತ್ತು ಎಂಬುದಕ್ಕೆ ಒಂದಷ್ಟು ಪುರಾವೆಗಳು ದೊರಕಿವೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಕ್ಷಯ್‌ಕುಮಾರ್‌ ಅದೇ ಸಮುದ್ರದೊಳಗೆ ಇಳಿದು ಕಲ್ಲೊಂದನ್ನು ಎತ್ತಿಕೊಂಡು ಬಂದು ಅಂತ್ಯದಲ್ಲಿ ರಾಮಸೇತು ನಿಜವೆಂಬುದು ಸಾರುತ್ತಾರೆ.

ಇನ್ನು, ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಥ್ಯಾಂಕ್ ಗಾಡ್ ಸಿನಿಮಾ, ದೀಪಾವಳಿ ಸಮಯದಲ್ಲೂ ಅತ್ಯಂತ ಕಡಿಮೆ ಗಳಿಕೆ ಕಂಡಿದೆ. ಮಂಗಳವಾರ ₹ 8.10 ಕೋಟಿ, ಬುಧವಾರ ₹ 6 ಕೋಟಿ ಮತ್ತು ಗುರುವಾರ ₹ 4.15 ಕೋಟಿ ಸೇರಿ 3 ದಿನಗಳಲ್ಲಿ ಕೇವಲ ₹ 18.25 ಕೋಟಿ ಗಳಿಸಿದೆ. ವಾರಾಂತ್ಯದಲ್ಲಿ ಆಗುವ ಗಳಿಕೆ ಚಿತ್ರದ ಯಶಸ್ಸನ್ನು ನಿರ್ಧರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT