ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಆಲಿಯಾ ಭಟ್‌

Published 15 ಮಾರ್ಚ್ 2024, 11:00 IST
Last Updated 15 ಮಾರ್ಚ್ 2024, 11:00 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಆಲಿಯಾ ಭಟ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 31ನೇ ಹುಟ್ಟುಹಬ್ಬವನ್ನು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ನಟಿಯ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು, ಸ್ನೇಹಿತರು, ಸಿನಿರಂಗದವರೂ ಸೇರಿದಂತೆ ಅಪಾರ ಅಭಿಮಾಗಳು ಶುಭಾಶಯ ಕೋರಿದ್ದಾರೆ.

ಸಿನಿ ಪಯಣ: ಆಲಿಯಾ ಭಟ್ ಅವರು 2012ರಲ್ಲಿ ಸಿನಿಪಯಣ ಆರಂಭಿಸಿದರು. 'ಸ್ಟೂಡೆಂಟ್ ಆಫ್ ದಿ ಇಯರ್' ಇವರ ಚೊಚ್ಚಲ ಚಿತ್ರ.

ಬಳಿಕ ಹೈವೇ, ಡಾರ್ಲಿಂಗ್ಸ್, ಶಾಂದಾರ್, ಕಪೂರ್ ಆ್ಯಂಡ್​ ಸನ್ಸ್, ಬದ್ರಿನಾಥ್ ಕಿ ದುಲ್‌ ಹನಿಯಾ, ಗಲ್ಲಿ ಬಾಯ್​, 2 ಸ್ಟೇಟ್ಸ್, ಡಿಯರ್ ಝಿಂದಗಿ, ರಾಝಿ, ಕಲಂಕ್, ಆರ್​ಆರ್​ಆರ್​, ಗಂಗೂಬಾಯಿ ಕಾಠಿಯಾವಾಡಿ, ಬ್ರಹ್ಮಾಸ್ತ್ರ, ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಆಲಿಯಾ ಭಟ್ ಅವರು ಕಳೆದ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ನಟಿ) ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT