ಸೋಮವಾರ, ಮೇ 23, 2022
26 °C

ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಮನ್ನಣೆ ಗಳಿಸಿದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನ ಹಾಗೂ ಆಲಿಯಾ ಭಟ್ ಪ್ರಧಾನ ಭೂಮಿಕೆಯಲ್ಲಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಮನ್ನಣೆ ಗಳಿಸಿದೆ.

ಇಂಗ್ಲಿಷೇತರ ಭಾಷಾ ವಿಭಾಗದ ಚಿತ್ರಗಳ ಪೈಕಿ, ಆಲಿಯಾ ಭಟ್ ಸಿನಿಮಾ ಜಾಗತಿಕವಾಗಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.

ಜತೆಗೆ 25 ರಾಷ್ಟ್ರಗಳಲ್ಲಿ ಟಾಪ್ 10 ಪಟ್ಟಿಯಲ್ಲಿ ಟ್ರೆಂಡ್ ಆಗಿದ್ದು, ಗರಿಷ್ಠ ವೀಕ್ಷಣೆ  ಪಡೆದುಕೊಂಡಿದೆ.

ಈ ಕುರಿತು ನೆಟ್‌ಫ್ಲಿಕ್ಸ್ ಇಂಡಿಯಾ ಟ್ವೀಟ್ ಮಾಡಿದ್ದು, ಬಾಲಿವುಡ್ ಸಿನಿಮಾ ಜಾಗತಿಕವಾಗಿ ಭಾಷೆಗಳನ್ನು ಮೀರಿ ಟಾಪ್ ಸ್ಥಾನದಲ್ಲಿದೆ ಎಂದು ಹೇಳಿದೆ.

ಏಪ್ರಿಲ್ 26ರಂದು ‘ಗಂಗೂಬಾಯಿ ಕಾಠಿಯಾವಾಡಿ‘ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದಲೂ ಟ್ರೆಂಡ್ ಮುಂದುವರಿದಿದ್ದು, ಈವರೆಗೆ 13,810,000 ಗಂಟೆಗಳ ವೀಕ್ಷಣೆಯೊಂದಿಗೆ ಜಾಗತಿಕವಾಗಿ ಟಾಪ್‌ನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು