ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರ ಪೋಷಣೆಗೆ ಕಾಮಾಟಿಪುರದ ವೇಶ್ಯೆಯರನ್ನು ಭೇಟಿಯಾಗಿದ್ದ ಆಲಿಯಾ ಭಟ್‌

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ 'ಗಂಗೂಬಾಯಿ ಕಾಠಿಯಾವಾಡಿ'
Last Updated 4 ಫೆಬ್ರುವರಿ 2022, 8:10 IST
ಅಕ್ಷರ ಗಾತ್ರ

ಸಂಜಯ್‌ ಲೀಲಾ ಬನ್ಸಾಲಿ ಅವರ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿ ಆಲಿಯಾ ಭಟ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಆಲಿಯಾ ಅವರು ಕಾಮಾಟಿಪುರಕ್ಕೆ ಭೇಟಿ ಕೊಟ್ಟು, ಅಲ್ಲಿನ ವೇಶ್ಯೆಯರ ಜೊತೆ ಸಮಯ ಕಳೆದಿದ್ದಾರೆ.

ಗಂಗೂಬಾಯಿ ಅವರು ಹಲವು ವರ್ಷಗಳನ್ನು ಕಳೆದಿರುವ ಕಾಮಾಟಿಪುರದ ರೆಡ್‌-ಲೈಟ್‌ ಪ್ರದೇಶಕ್ಕೆ ಭೇಟಿ ನೀಡಿ, ನಿಜ ಜೀವನದ ವೇಶ್ಯೆಯರ ಬದುಕನ್ನು ಅರಿತುಕೊಂಡು ಪಾತ್ರವನ್ನು ಆಲಿಯಾ ಭಟ್‌ ನಿರ್ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಲಿಯಾ ಭಟ್‌ ಅವರ ಪಾತ್ರದ ಬಗೆಗಿನ ಅವಲೋಕನ, ಶ್ರಮ ಮತ್ತು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಮೇಲಿನ ವಿಶ್ವಾಸಗಳ ಫಲಿತಾಂಶವಾಗಿ ಪಾತ್ರ ಅಚ್ಚುಕಟ್ಟಾಗಿ ಬಂದಿದೆ ಎನ್ನಲಾಗಿದೆ.

ಆರಂಭದಲ್ಲಿ ಜನವರಿ 6ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊನೆಗೆ ಫೆಬ್ರುವರಿ 18ಕ್ಕೆ ಮುಂದೂಡಲಾಗಿತ್ತು. ಇದೀಗ ಅಂತಿಮವಾಗಿ ಫೆಬ್ರುವರಿ 25ರಂದು ತೆರೆಗೆ ಬರಲಿದೆ.

ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್‌ ದೇವಗನ್‌ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT