ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ₹11 ಕೋಟಿ ಗಳಿಸಿದ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’

Published 30 ಜುಲೈ 2023, 5:18 IST
Last Updated 30 ಜುಲೈ 2023, 5:18 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮತ್ತು ನಟಿ ಆಲಿಯಾ ಭಟ್‌ ನಟಿಸಿರುವ ಫ್ಯಾಮಿಲಿ ಎಂಟರ್ಟೈನರ್‌ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ₹11.10 ಕೋಟಿಯನ್ನು ತನ್ನ ಗಲ್ಲಾಪೆಟ್ಟಿಗೆಗೆ ಹಾಕಿಕೊಂಡಿದೆ ಎಂದು ಚಿತ್ರ ನಿರ್ಮಾಪಕ ಕರಣ್‌ ಜೋಹರ್ ಶನಿವಾರ ತಿಳಿಸಿದ್ದಾರೆ.

ಜೋಹರ್‌ ಅವರ ಧರ್ಮ ಪ್ರೊಡಕ್ಷನ್‌ ಬ್ಯಾನರ್‌ ತನ್ನ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಚಿತ್ರದ ಮೊದಲ ದಿನದ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ಹಂಚಿಕೊಂಡಿದೆ.

‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರಕ್ಕೆ ಮೊದಲ ದಿನದ ವೀಕ್ಷಣೆಯಲ್ಲಿ ನೀವು ತೋರಿಸಿರುವ ಪ್ರೀತಿ ಗಲ್ಲಾಪೆಟ್ಟಿಗೆಯಲ್ಲಿ ಝಣಝಣಿಸುತ್ತಿದೆ. ಈ ಚಿತ್ರವು ಕರಣ್‌ ಜೋಹರ್ ಅವರ ಚಲನಚಿತ್ರ ರಂಗದ 25ನೇ ವಾರ್ಷಿಕೋತ್ಸವದ ಸಾಕ್ಷಿಯಾಗಿದೆ ಎಂದು ಸ್ಟುಡಿಯೊ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ.

ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಗಳಿಂದ ಬಂದ ಜೋಡಿಯ ಕಥೆಯನ್ನು ಒಳಗೊಂಡ ಚಿತ್ರದ ಟ್ರೆಲರ್‌ ಈ ತಿಂಗಳ (ಜುಲೈ) ಆರಂಭದಲ್ಲಿ ಅನಾವರಣಗೊಂಡಿತ್ತು. ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್‌ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ.

2016 ರ ಏ ದಿಲ್‌ ಹೈ ಮುಷ್ಕಿಲ್‌ ನಂತರ ಜೋಹರ್‌ ನಿರ್ದೇಶನ ಮಾಡಿರುವ ಚಿತ್ರ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT