ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲು ಅರ್ಜುನ್‌ ಅಭಿಯನದ ‘ಪುಷ್ಪ: ದಿ ರೂಲ್‌’ ಸಿನಿಮಾ ಮುಂದಿನ ವರ್ಷ ತೆರೆಗೆ

Published 5 ಆಗಸ್ಟ್ 2023, 10:03 IST
Last Updated 5 ಆಗಸ್ಟ್ 2023, 10:03 IST
ಅಕ್ಷರ ಗಾತ್ರ

ಮುಂಬೈ: ಟಾಲಿವುಟ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಬಹು ನಿರೀಕ್ಷಿತ ಸಿನಿಮಾ ಪುಷ್ಪ : ದಿ ರೂಲ್‌ ಸಿನಿಮಾದ ಚಿತ್ರೀಕರಣವು ನಾಳೆಯಿಂದ (ಭಾನುವಾರ) ಹೈದರಾಬಾದ್‌ನ ರಾಮೋಜಿ ರಾವ್‌ ಫಿಲ್ಮ್ ಸ್ಟುಡಿಯೊದಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪುಷ್ಪ-1 ಚಿತ್ರವು 2021ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಈ ಸಿನಿಮಾದ ಯಶಸ್ಸಿನಿಂದಾಗಿ ನಟ ಅಲ್ಲು ಅರ್ಜುನ್‌ ಅವರ ಖ್ಯಾತಿಯೂ ಮತ್ತಷ್ಟು ಹೆಚ್ಚಿತ್ತು. ಇದೀಗ ಪುಷ್ಪ–1ರ ಮುಂದಿನ ಭಾಗ ಪುಷ್ಪ: ದಿ ರೂಲ್‌ ಸಿನಿಮಾದ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆಯಾದಾಗಿನಿಂದ ಅಲ್ಲು ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಿದೆ.

ಹೈದರಾಬಾದ್‌ನ ರಾಮೋಜಿ ರಾವ್‌ ಫಿಲ್ಮ್ ಸ್ಟುಡಿಯೊದಲ್ಲಿ ಬೃಹತ್‌ ಮಟ್ಟದಲ್ಲಿ ಸೆಟ್‌ಗಳನ್ನು ಹಾಕಿ ಅದ್ದೂರಿಯಾಗಿ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಪುಷ್ಪ: ದಿ ರೂಲ್‌ ಸಿನಿಮಾದ ಚಿತ್ರೀಕರಣದ ಪ್ರಮುಖ ದೃಶ್ಯಗಳು ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ರಾಮೋಜಿ ಸ್ಟುಡಿಯೊದಲ್ಲಿ ನಡೆಯಲಿರುವ ಚಿತ್ರೀಕರಣಕ್ಕಾಗಿ ಚಿತ್ರದ ನಿರ್ಮಾಣ ಪೂರ್ವ ಕೆಲಸಗಳು ಮುಗಿದಿದೆ. ಅಲ್ಲು ಅರ್ಜುನ್‌ ಸೇರಿದಂತೆ ನಟ– ನಟಿಯರು ಚಿತ್ರೀಕರಣಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎಂದಿದೆ.

ಅಲ್ಲು ಅರ್ಜುನ್‌ ಅವರು ನಿರ್ಮಾಪಕ ಭೂಷಣ್‌ ಕುಮಾರ್ ಹಾಗೂ ಸಂದೀಪ್‌ ರೆಡ್ಡಿ ಮತ್ತು ತ್ರಿವಿಕ್ರಮ್‌ ನಿರ್ದೇಶನದ ಇನ್ನೂ ಹೆಸರಿಡಾದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT