ಮಂಗಳವಾರ, ಜನವರಿ 19, 2021
ಅಂಬಿ ಸಮಾಧಿಗೆ ಪೂಜೆ

ಅಂಬರೀಶ್ ನೆನಪಿಗೆ ಸುಮಲತಾ ಅಕ್ಷರ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಅಂಬರೀಶ್‌‌ ಅವರು ಅಗಲಿ ಇಂದಿಗೆ ಎರಡು ವರ್ಷ. ಮಂಗಳವಾರ ಬೆಳಿಗ್ಗೆ ಪತ್ನಿ, ಸಂಸದೆ ಸುಮಲತಾ, ಪುತ್ರ ಅಭಿಷೇಕ್‌ ಅವರು ಅಂಬರೀಶ್‌‌ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಸುಮಲತಾ ಅವರು ಇನ್‌ಸ್ಟಾಗ್ರಾಂನಲ್ಲಿ ದೀರ್ಘ ಬರಹದ ಮೂಲಕ ಅಂಬರೀಶ್‌ ಅವರನ್ನು ಸ್ಮರಿಸಿದ್ದು ಹೀಗೆ.

‘ನಿಮ್ಮನ್ನು ನೋಡಲು ಕಣ್ಣು ಮುಚ್ಚುತ್ತೇನೆ. ನಿಮ ಧ್ವನಿ ಕೇಳಲು ಕಿವಿಯನ್ನು ಮುಚ್ಚಿಕೊಳ್ಳುತ್ತೇನೆ. ಆದರೆ ನನ್ನ ಹೃದಯವನ್ನು ಮುಚ್ಚಲು ಸಾಧ್ಯವಿಲ್ಲ. ಈ ಅಗಾಧ ಪ್ರೀತಿಯನ್ನು ಹಾಗೂ ನಿಮ್ಮ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವ ಹಂಬಲವಿದೆ. ಆದರೆ ಈ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಲು ಯಾವುದೇ ಹೃದಯಕ್ಕೆ ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನೂ ಸದಾ ಸ್ಮರಿಸುತ್ತೇನೆ. ನನ್ನ ಪ್ರತಿ ಉಸಿರಿನಲ್ಲೂ ನೀವು ಇರುತ್ತೀರಿ. ನಿಮ್ಮ ಪ್ರೀತಿಯೇ ನನಗೆ ಶಕ್ತಿ ಹಾಗೂ ಧೈರ್ಯ. ನನ್ನ ಜೀವನದಲ್ಲಿ ಏಳು ಬೀಳು ಕಂಡಾಗ ನನಗೆ ಧೈರ್ಯ ನೀಡುವುದೇ ನಿಮ್ಮ ಪ್ರೀತಿ...'

ಪೂಜೆಯ ವೇಳೆ ನಟರಾದ ದರ್ಶನ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು