ಭಾನುವಾರ, ನವೆಂಬರ್ 27, 2022
27 °C

ಅಮಿತಾಭ್‌ 80ನೇ ಹುಟ್ಟುಹಬ್ಬಕ್ಕೆ ವಿಶೇಷ ಸಿನಿಮೋತ್ಸವ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಬಿಗ್‌ ಬಿ 80ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಘಟ್ಟವನ್ನು ಸಂಭ್ರಮಿಸಲು ಫಿಲಂ ಹೆರಿಟೇಜ್‌ ಫೌಂಡೇಷನ್‌ ಎಂಬ ಎನ್‌ಜಿಒ ದೇಶದಾದ್ಯಂತ ಅಮಿತಾಭ್‌ ಬಚ್ಚನ್‌ ವಿಶೇಷ ಸಿನಿಮೋತ್ಸವ ಘೋಷಿಸಿದೆ. ದೇಶದ 17 ನಗರಗಳಲ್ಲಿ ಬಿಗ್‌ ಬಿ ಆಯ್ದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಡಾನ್‌, ಕಾಲ ಪತ್ತರ್‌ ಮತ್ತು ಕಾಲಿಯಾ ಸೇರಿದಂತೆ ಅಮಿತಾಬ್‌ ಅವರ 11 ಸಿನಿಮಾಗಳು ಪಿವಿಆರ್‌ ಸಹಭಾಗಿತ್ವದಲ್ಲಿ ಪ್ರದರ್ಶನಗೊಳ್ಳಲಿವೆ. ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ‘ಪ್ರಾರಂಭಕ್ಕೆ ಮರಳಿದ ಬಚ್ಚನ್‌’ ಎಂದು ಹೆಸರಿಡಲಾಗಿದೆ. 22 ಸಿನಿಮಾ ಮಂದಿರಗಳ 30 ಸ್ಕ್ರೀನ್‌ಗಳಲ್ಲಿ 172 ಪ್ರದರ್ಶನಗಳು ನಡೆಯಲಿವೆ.

ಈ ಕಾರ್ಯಕ್ರಮವು ಈಗಾಗಲೇ ಮುಗಿದು ಹೋಗಿರುವ ಆದರೆ ಮರೆಯದ ಕಾಲವನ್ನು ಮತ್ತೆ ಮರಳಿಸಲಿದೆ. ಇದಕ್ಕಾಗಿ ಭಾರತೀಯ ಸಿನಿಮಾ ಪರಂಪರೆಯನ್ನು ಉಳಿಸುವುದು ಮಹತ್ವದ್ದು. ಇದು ಹಲವಾರು ಸಿನಿಮೋತ್ಸವಗಳ ಪ್ರಾರಂಭ’ ಎಂದು ಅಮಿತಾಭ್‌ ಬಚ್ಚನ್‌ ಹೇಳಿದ್ದಾರೆ.

ಮುಂಬೈ, ದೆಹಲಿ, ಕೋಲ್ಕತಾ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಸಿನಿಮೋತ್ಸವ ನಡೆಯಲಿದೆ. ಬಚ್ಚನ್‌ ಅವರ ಹುಟ್ಟೂರು ಪ್ರಯಾಗ್‌ರಾಜ್‌ನಲ್ಲಿಯೂ ಕೆಲ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಬಾಲಿವುಡ್‌ನ ನಟ ಸಾಮ್ರಾಟನ ಹಳೆಯ ಸಿನಿಮಾಗಳನ್ನು ಮತ್ತೊಮ್ಮೆ ಕಣ್ಣುತುಂಬಿಕೊಳ್ಳುವ ಅವಕಾಶವನ್ನು ಈ ಸಿನಿಮೋತ್ಸವ ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು