ಗುರುವಾರ , ಮಾರ್ಚ್ 30, 2023
24 °C

ವಂಚಕ ಸುಕೇಶ್‌ ಚಂದ್ರಶೇಖರ್‌ ಜೀವನದ ಕಥೆ ತೆರೆಯ ಮೇಲೆ: ನಿರ್ದೇಶಕ ಆನಂದ್‌ ಕುಮಾರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಹಣ ಅಕ್ರಮ ವರ್ಗಾವಣೆ ಹಾಗೂ ಉದ್ಯಮಿಗಳಿಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತರುವ ಸುಕೇಶ್ ಚಂದ್ರಶೇಖರ್‌ ಕುರಿತಾದ ಸಿನಿಮಾ ಅಥವಾ ವೆಬ್‌ ಸಿರೀಸ್‌ ಮಾಡುವುದಾಗಿ ನಿರ್ದೇಶಕ ನಿರ್ದೇಶಕ ಆನಂದ್ ಕುಮಾರ್ ಹೇಳಿದ್ದಾರೆ.

ಸದ್ಯ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ 10 ರಿಂದ 12 ಭಾಷೆಗಳನ್ನು ಮಾತನಾಡುತ್ತಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸಂಬಂಧ ಹೊಂದಿದ್ದಾರೆ. ಇದಕ್ಕೆ ಅವರ ಫೋಟೊಗಳೇ ಸಾಕ್ಷಿ. ಒಟ್ಟಾರೆ ಅವರ ಜೀವನವೇ ಕೌತುಕಮಯವಾಗಿದೆ. ಈಗಾಗಿ ಅವರ ಜೀವನದ ಕುರಿತು ಸಿನಿಮಾ ಅಥವಾ ವೆಬ್ ಸಿರೀಸ್ ಮಾಡಲಾಗುವುದು ಎಂದು ಆನಂದ್ ಕುಮಾರ್ ಹೇಳಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ನನಗೂ ಸಂಬಂಧ ಇತ್ತು ಎಂದು ಸುಕೇಶ್‌ ಕೂಡ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಬಾಲಿವುಡ್‌ ನಟಿಯ ಜೊತೆ ಪ್ರೇಮ ಸಲ್ಲಾಪ, ಜನರು, ಉದ್ಯಮಿಗಳನ್ನು ವಂಚಿಸುವ ರೀತಿ, ಇದಕ್ಕಾಗಿ ಪ್ಲಾನ್‌ ಮಾಡುವುದು ಸೇರಿದಂತೆ ಸುಕೇಶ್‌ ಮಾಸ್ಟರ್ ಮೈಂಡ್ ಹೇಗಿತ್ತು ಎಂಬುದನ್ನು ನಾನು ಜನರಿಗೆ ತೋರಿಸಬೇಕು ಎಂದು ಆನಂದ್ ಕುಮಾರ್ ಹೇಳಿದ್ದಾರೆ.

ಬಯೋಪಿಕ್ ಮಾಡೋದು ಮಹಾನ್ ವ್ಯಕ್ತಿಗಳ ಜೀವನದ ಕುರಿತು. ಆದರೆ ಸುಕೇಶ್‌ ವಂಚಕ. ಇದು ಸಿನಿಮಾ ಮಾತ್ರ, ಬಯೋಪಿಕ್‌ ಅಲ್ಲ ಎಂದು ಆನಂದ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಸುಕೇಶ್‌ ಇರುವ ಜೈಲಿನ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ, ಅಲ್ಲಿ ಕಥಾ ವಸ್ತುವಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು