ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟು ನಾಟು’ ಹಾಡಿಗೆ ಖಾನ್‌ತ್ರಯರ ಹೆಜ್ಜೆ; ಜೈ ಶ್ರೀರಾಮ್ ಎಂದ ಶಾರುಕ್

Published 3 ಮಾರ್ಚ್ 2024, 12:42 IST
Last Updated 3 ಮಾರ್ಚ್ 2024, 12:42 IST
ಅಕ್ಷರ ಗಾತ್ರ

ಜಾಮ್‌ನಗರ: ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. 2ನೇ ದಿನ ಬಾಲಿವುಡ್‌ನ ಖಾನ್‌ತ್ರಯರಾದ ಶಾರುಕ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರು ತೆಲುಗಿನ ‘ಆರ್‌ಆರ್‌ಆರ್‌’ ಚಿತ್ರದ ಜನಪ್ರಿಯ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಜಾಮ್‌ನಗರದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್) ಸಮೀಪ ಮದುವೆಗಾಗಿ ನಿರ್ಮಿಸಲಾಗಿರುವ ಅದ್ದೂರಿ ವೇದಿಕೆಯಲ್ಲಿ ಬಾಲಿವುಡ್‌ನ ಖ್ಯಾತ ನಟರು ಕುಣಿದು ಕುಪ್ಪಳಿಸಿದರು.

ನಟ ರಾಮ್ ಚರಣ್ ಅವರ ಸಹಾಯ ಪಡೆದು ‘ನಾಟು ನಾಟು’ಹಾಡಿಗೆ ಸಲ್ಮಾನ್, ಶಾರುಕ್ ಮತ್ತು ಅಮೀರ್ ಹೆಜ್ಜೆ ಹಾಕಿದರು. ಆದರೆ, ಅದು ಅಭಿಮಾನಿಗಳ ನಿರೀಕ್ಷೆಯಂತೆ ಆಗಲಿಲ್ಲ. ಬಳಿಕ, ತಮ್ಮ ಪ್ರಸಿದ್ಧ ‘ಮುಜ್‌ ಸೆ ಶಾದಿ ಕರೋಗಿ’ ಚಿತ್ರದ ‘ಜೀನೆ ಕೇ ಹೈ ಚಾರ್ ದಿನ್’ ಹಾಡಿಗೆ ಟವಲ್ ಹಿಡಿದು ಸಲ್ಮಾನ್ ಡ್ಯಾನ್ಸ್ ಮಾಡಿದರು. ಬಳಿಕ ಸಲ್ಮಾನ್ ಖಾನ್ ಅವರನ್ನು ಅನುಕರಿಸಿದ ಶಾರುಕ್ ಮತ್ತು ಅಮೀರ್, ‘ಮಸ್ತಿ ಕಿ ಪಾಠಶಾಲ’, ‘ಚಯ್ಯ ಚಯ್ಯ’ ಹಾಡಿಗೆ ಕುಣಿದರು.

ಬಳಿಕ, ‘ನಾಟು ನಾಟು’ ಹಾಡಿನ ಹಿಂದಿ ಅವತರಣಿಕೆ ‘ನಾಚೊ ನಾಚೊ’ ಹಾಡಿಗೆ ಮೂವರೂ ಹೆಜ್ಜೆ ಹಾಕಿದರು.

ಇದೇವೇಳೆ, ಶಾರುಕ್ ಖಾನ್ ವೇದಿಕೆ ಮೇಲೆ ‘ಜೈ ರಾಮ್’ ಮಂತ್ರ ಪಠಿಸಿದರು. ನಂತರ, ಪಠಾಣ್ ಚಿತ್ರದ ಹಾಡು, ಸಲಾಮ್ ಇ ಇಷ್ಕ್, ದೀದಿ ತೇರಾ ದೀವಾನಾ ಮುಂತಾದ ಹಾಡುಗಳಿಗೂ ಕುಣಿದು ಕುಪ್ಪಳಿಸಿದರು.

2ನೇ ದಿನ ಐಷಾರಾಮಿ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ–ರಣವೀರ್ ಸಿಂಗ್, ದಿಲ್ಜಿತ್ ದೊಸಾಂಜ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಜಾಹ್ನವಿ ಕಪೂರ್, ಖುಷಿ ಕಪೂರ್ ಮುಂತಾದ ಸೆಲೆಬ್ರಿಟಿಗಳು ಗಮನ ಸೆಳೆದರು.

ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಇತ್ತೀಚೆಗೆ ಘೋಷಿಸಿರುವ ದೀಪಿಕಾ–ರಣವೀರ್ ದಂಪತಿ ‘ಗಲ್ಲ ಗೂಡಿಯಾನ್’ ಹಾಡಿಗೆ ಕುಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT