ವಿಜಯವಾಡ: ಸಿನಿಮಾ ಟಿಕೆಟ್ಗಳು ಸೇರಿದಂತೆ ತಂಪು ಪಾನೀಯ, ಆಹಾರ ಪದಾರ್ಥಗಳ ದರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ವ್ಯವಸ್ಥಿತ ಮತ್ತು ಏಕರೂಪ ದರ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಪಾಪ್ಕಾರ್ನ್, ತಂಪು ಪಾನೀಯಗಳು, ನೀರಿನ ಬಾಟಲ್ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಸ್ತುಗಳ ದರ ಸೇರಿದಂತೆ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜೂನ್ 12 ರಂದು ಬಿಡುಗಡೆಯಾಗಲಿರುವ ತಮ್ಮ 'ಹರಿ ಹರ ವೀರ ಮಲ್ಲು' ಚಿತ್ರವೂ ಸೇರಿದಂತೆ ಸಿನಿಮಾ ಟಿಕೆಟ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ತೆಲುಗು ಚಲನಚಿತ್ರ ಮಂಡಳಿಗೆ (ಟಿಎಫ್ಸಿ) ಅರ್ಜಿ ಸಲ್ಲಿಸಬೇಕು. ವಿನಃ ಸ್ವತಂತ್ರವಾಗಿ ಟಿಕೆಟ್ ಬೆಲೆ ನಿಗದಿಪಡಿಸುವಂತಿಲ್ಲ ಎಂದು ಕಲ್ಯಾಣ್ ಹೇಳಿದ್ದಾರೆ.
.ಜೂನ್ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ.ಕೇರಳ | ಲೈಬೀರಿಯಾ ಹಡಗು ಮುಳುಗಡೆ: ತೈಲ ಸೋರಿಕೆಯಾಗಿಲ್ಲ ಎಂದ ಕರಾವಳಿ ಕಾವಲು ಪಡೆ.
ಮಲ್ಟಿಪ್ಲೆಕ್ಸ್ಗಳು ಮತ್ತು ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಏಕಸ್ವಾಮ್ಯ ಪದ್ಧತಿ ಜಾರಿ ಸಂಬಂಧ ಸೂಕ್ತ ತನಿಖೆಗೆ ಆದೇಶಿಸಲಾಗಿದೆ ಎಂದು ಕಲ್ಯಾಣ್ ತಿಳಿಸಿದ್ದಾರೆ.

ಹೆಚ್ಚಿನ ಬೆಲೆಗಳ ಕಾರಣದಿಂದಾಗಿ ಚಿತ್ರಮಂದಿರಗಳಿಗೆ ಭೇಟಿ ನೀಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಬಾರದು. ದರ ಕಡಿಮೆ ಮಾಡುವುದರಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು. ಈ ಮೂಲಕ ತೆರಿಗೆ ಆದಾಯ ಹೆಚ್ಚಾಗಬಹುದು ಎಂದು ಕಲ್ಯಾಣ್ ಹೇಳಿದ್ದಾರೆ.

ಚಿತ್ರಮಂದಿರಗಳ ಸ್ಥಗಿತಕ್ಕೆ ಸಂಬಂಧಿಸಿದಂತೆ ಜನಸೇನಾ ಪಕ್ಷದವರು ಸೇರಿದಂತೆ ರಾಜಕೀಯ ವ್ಯಕ್ತಿಗಳು ಭಾಗಿಯಾಗಿರುವ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ಕಲ್ಯಾಣ್ ಒತ್ತಾಯಿಸಿದ್ದಾರೆ.
.ಬಿಟಿಎಂ ಲೇಔಟ್ ವಿಧಾನಸಭಾ ವ್ಯಾಪ್ತಿಯಲ್ಲಿ ಪುಡಿರೌಡಿಗಳ ಅಟ್ಟಹಾಸ: ಜೆಡಿಎಸ್ ಆರೋಪ.ಮಡೆನೂರು ಮನುಗೆ ಅಸಹಕಾರ: ಆಯುಕ್ತರಿಗೆ ದೂರು .ಬಾಲಿವುಡ್ ನಟ ಆದಿತ್ಯ ಕಪೂರ್ ಮನೆಗೆ ಅಕ್ರಮ ಪ್ರವೇಶ: ದುಬೈ ಮೂಲದ ಮಹಿಳೆ ಬಂಧನ.ಇಂಡಿಗೊ ವಿಮಾನಯಾನ ಸಂಸ್ಥೆಯ ₹11,594 ಕೋಟಿ ಮೌಲ್ಯದ ಷೇರುಗಳ ಮಾರಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.