ಭಾನುವಾರ, ಸೆಪ್ಟೆಂಬರ್ 26, 2021
21 °C

ಮಾವ ಅನಿಲ್‌ ಕಪೂರ್‌ನ ಡ್ಯಾನ್ಸ್‌ ಮೆಚ್ಚಿದ ಅಳಿಯ ಕರಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಅನಿಲ್‌ ಕುಪೂರ್‌ ಅವರು ಜಮರ್ನಿಯಲ್ಲಿ ಸ್ಥಳೀಯ ಸಂಗೀತ ಗೋಷ್ಠಿಯಲ್ಲಿ ಹೆಜ್ಜೆ ಹಾಕುವ ಮೂಲಕ ಅಳಿಯ ಕರಣ್‌ ಬೂಲಾನಿ ಅವರ ಮನ ಗೆದ್ದಿದ್ದಾರೆ.

ಜರ್ಮನಿಯ ಮೂನಿಚ್‌ ನಗರದ ಪಾರ್ಕ್‌ನಲ್ಲಿ ವಾದ್ಯ ಗೋಷ್ಠಿಯೊಂದು ನಡೆಯುತ್ತಿತ್ತು. ಅಲ್ಲಿಗೆ ತೆರಳಿದ ಅನಿಲ್‌ ಕಪೂರ್‌ ಆ ಸಂಗೀತಕ್ಕೆ ಮನಸೋತು ಹೆಜ್ಜೆ ಹಾಕಿದ್ದಾರೆ. 

ತಾವು ನೃತ್ಯ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಳಿಯ ಕರಣ್‌ (ಮಗಳು ರೆಹಾ ಕಪೂರ್‌ ಪತಿ) ಅನಿಲ್‌ ಕಪೂರ್‌ ಅವರ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನಿಲ್‌ ಕಪೂರ್‌ ಅವರ ಡ್ಯಾನ್ಸ್‌ ವಿಡಿಯೊಗೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಶೇರ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು