ಶುಕ್ರವಾರ, ಡಿಸೆಂಬರ್ 3, 2021
20 °C

ಪ್ರಜ್ವಲ್​ ​-ರಾಗಿಣಿ ಜೋಡಿಗೆ 6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಪ್ರಜ್ವಲ್‌ ದೇವರಾಜ್‌ –ರಾಗಿಣಿ ದಂಪತಿ ಇಂದು (ಮಂಗಳವಾರ) 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

ಈ ಸಂತೋಷದ ಸಮಯದಲ್ಲಿ ತಮ್ಮ ವಿವಾಹ ವಿಡಿಯೊವನ್ನು ಹಂಚಿಕೊಂಡಿರುವ ರಾಗಿಣಿ, ಪ್ರೀತಿಯ ಪತಿಗೆ ತಮ್ಮ ಹೃದಯದ ಮಾತುಗಳನ್ನು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸದ್ಯ ರಾಗಿಣಿ ಹಂಚಿಕೊಂಡಿರುವ ವಿಡಿಯೊಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಗಣ್ಯರು ದಂಪತಿಗೆ ಶುಭ ಕೋರಿದ್ದಾರೆ.

ಪ್ರಜ್ವಲ್​ ಮತ್ತು ರಾಗಿಣಿ ಬಹುಕಾಲದ ಸ್ನೇಹಿತರು. ಇಬ್ಬರ ನಡುವಿನ ಸ್ನೇಹವು ನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಮನೆಯವರ ಒಪ್ಪಿಗೆಯಿಂದ ಈ ಜೋಡಿ 2015ರ ಅಕ್ಟೋಬರ್​ನಲ್ಲಿ ಸಪ್ತಪದಿ ತುಳಿದಿತ್ತು.

ಸದ್ಯ ಪ್ರಜ್ವಲ್ ದೇವರಾಜ್ ತಾವು ನಟಿಸುತ್ತಿರುವ 35ನೇ ಚಿತ್ರ ‘ಮಾಫಿಯಾ’ದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಗುರುದತ್‌ ಗಾಣಿಗ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಜ್ವಲ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

ಇದನ್ನೂ ಓದಿ... 47ನೇ ವಸಂತಕ್ಕೆ ಕಾಲಿಟ್ಟ ನಟಿ ರವೀನಾ ಟಂಡನ್: ಅಭಿಮಾನಿಗಳಿಂದ ಶುಭ ಹಾರೈಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು