ಬುಧವಾರ, ಜನವರಿ 22, 2020
19 °C

ಅನುಷ್ಕಾ ಮಾತು: ಕೊಹ್ಲಿಯನ್ನು ಪ್ರೀತಿಸುವುದು ದೇವರ ಮುಖ ನೋಡಿದಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

2017 ಡಿಸೆಂಬರ್‌ 11ರಂದು ಕೊಹ್ಲಿ ಮತ್ತು ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದರು. ತಮ್ಮ ವಿವಾಹ ವಾರ್ಷಿಕೋತ್ಸವದ ಸವಿನೆನಪಿಗಾಗಿ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವಿವಾಹ ಸಂದರ್ಭದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಫೋಟೊಗಳ ಜೊತೆಗೆ ಅವರು ಭೇಟಿಯಾದ ಕ್ಷಣಗಳು, ಸುತ್ತಾಡಿದ ತಾಣಗಳು, ತಮಾಷೆಗಳನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 2013ರಲ್ಲಿ ಶ್ಯಾಂಪೂವಿನ ಜಾಹೀರಾತು ಶೂಟಿಂಗ್‌ ವೇಳೆ ಕೊಹ್ಲಿ ಮತ್ತು ಅನುಷ್ಕಾ ಪರಸ್ಪರ ಭೇಟಿಯಾಗಿದ್ದರು. ಈ ವೇಳೆ ಕೊಹ್ಲಿ ತುಂಬಾ ಗಾಬರಿಗೊಂಡಿದ್ದರಂತೆ. 

ಕಪ್ಪು ಬಿಳುಪಿನ ಚಿತ್ರವನ್ನು ಶೇರ್‌ ಮಾಡಿರುವ ಅನುಷ್ಕಾ ಶರ್ಮಾ, ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ದೇವರ ಮುಖವನ್ನು ನೋಡಿದಂತೆ ಎಂದು ಕವಿ ವಿಕ್ಟರ್‌ ಹುಗೊ ಅವರ ಸಾಲನ್ನು ಉಲ್ಲೇಖಿಸುವ ಮೂಲಕ ಕೊಹ್ಲಿಯನ್ನು ದೇವರಿಗೆ ಅರ್ಪಿಸಿದ್ದಾರೆ. ಪ್ರೀತಿ ಕೇವಲ ಭಾವನೆ ಅಲ್ಲ, ಅದು ದಾರಿ ದೀಪ, ಚೈತನ್ಯ ಮತ್ತು ಸತ್ಯ ಅದನ್ನು ಪಡೆಯಲು ದೇವರು ಆಶೀರ್ವಾದ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಹಣೆಗೆ ಚುಂಬಿಸುವ ಕಪ್ಪು ಬಿಳುಪಿನ ಚಿತ್ರವನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದು, ಇಲ್ಲಿ ಪ್ರೀತಿಯೊಂದೇ ಸತ್ಯ ಉಳಿದದ್ದು ಮಿಥ್ಯ, ದೇವರು  ಪ್ರತಿದಿನವೂ ನನಗೆ ಅರಿವು ಮೂಡಿಸುವ ಸಂಗಾತಿಯನ್ನು ಆಶೀರ್ವದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇಂದು ಮುಂಬೈನಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಮೂರನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದರಲ್ಲಿ ಗೆಲುವು ಸಾಧಿಸಿವೆ. ವಿರಾಟ್‌ ಕೊಹ್ಲಿ ಈ ಪಂದ್ಯವನ್ನು ಗೆದ್ದು ಅನುಷ್ಕಾಗೆ ಉಡುಗೊರೆ ನೀಡುತ್ತಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು