ಭಾನುವಾರ, ಜುಲೈ 25, 2021
26 °C

ಅನುಷ್ಕಾ ಶರ್ಮಾ ಮತ್ತು ಬಾಲ್ಕನಿ ಗೆಳೆಯರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಂ ಗಾರ್ಡನಿಂಗ್‌ನಲ್ಲಿ ಅನುಷ್ಕಾ

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ತಮ್ಮ ಬಾಲ್ಕನಿ ಗೆಳೆಯರೊಂದಿಗೆ ಕಳೆದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅರೆ, ಯಾರಿದು ಬಾಲ್ಕನಿ ಗೆಳೆಯರು ಎಂದು ಯೋಚಿಸಬೇಡಿ. ಮನೆಯ ಮಹಡಿ ಹಾಗೂ ಬಾಲ್ಕನಿಯಲ್ಲಿ ಪುಟ್ಟ ತೋಟ ಮಾಡಿರುವ ಅನುಷ್ಕಾ, ಆ ತೋಟದಲ್ಲಿರುವ ಗಿಡಗಳನ್ನು 'ನನ್ನ ಗೆಳೆಯರು' ಎಂದು ಕರೆದಿದ್ದಾರೆ. 

ಬಾಲ್ಕನಿಯಲ್ಲಿ ರಬ್ಬರ್, ಮನಿಪ್ಲಾಂಟ್ ಸೇರಿ ಅನೇಕ ಗಿಡಗಳನ್ನು ಬೆಳದಿರುವ ಅನುಷ್ಕಾ ಅವುಗಳ ಆರೈಕೆಯಲ್ಲಿ ತೊಡಗಿದ್ದಾರೆ. ಗಿಡಗಳೊಂದಿಗೆ ಅನುಷ್ಕಾ ಒಡನಾಡುತ್ತಿರುವ ಫೋಟೊವನ್ನು ಪತಿ ವಿರಾಟ್‌ ಕೊಹ್ಲಿ ಕ್ಲಿಕಿಸಿದ್ದಾರೆ. ಈ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅನುಷ್ಕಾ ’ನಾನು ಮತ್ತು ನನ್ನ ಗೆಳೆಯರು‘ ಎಂದು ಶೀರ್ಷಿಕೆ ಬರೆದಿದ್ದಾರೆ.

 
 
 
 

 
 
 
 
 
 
 
 
 

Me and my buddies 🌱🌱🌱

A post shared by AnushkaSharma1588 (@anushkasharma) on

ಮುಂಜಾನೆ ವರ್ಕೌಟ್‌ ನಂತರವೂ ಈ ಗಿಡಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ ಅನುಷ್ಕಾ. ಅಪ್ಪನೊಡನೆ ಸೇರಿ ಈ ಕೈ ತೋಟ  ಮಾಡಿದ್ದಾರೆ. 

ಲಾಕ್‌ಡೌನ್‌ ಸಮಯವಾದ್ದರಿಂದ ಸದ್ಯ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಇವರ ನಿರ್ಮಾಣ ಸಂಸ್ಥೆಯ ಕೆಲಸಗಳು ನಡೆಯುತ್ತಿವೆ ಅಷ್ಟೆ. ಅಮೆಜಾನ್‌ ಪ್ರೈಂನಲ್ಲಿರುವ ’ಪಾತಾಳ್ ಲೋಕ್‌‘ ಸರಣಿ ಯಶಸ್ಸು ಕಂಡಿದೆ.

ಈ ಕುರಿತು ಸಂದರ್ಶವೊಂದರಲ್ಲಿ ಮಾತನಾಡಿದ ಅವರು ’ನನಗಾಗಿ ಸಿನಿಮಾ ಮಾಡಲು ಈ ನಿರ್ಮಾಣ ಸಂಸ್ಥೆ ಮಾಡಿಲ್ಲ. ಸದಭಿರುಚಿಯ ಸಿನಿಮಾ ಮಾಡಬೇಕು ಎಂಬ ಆಲೋಚನೆಯಿದೆ. ಮಹಿಳಾ ಕೇಂದ್ರೀತ ಕತೆಗಳ ಸಿನಿಮಾ ನಿರ್ಮಾಣ ಮಾಡುವ ಕನಸಿದೆ‘ ಎಂದು ಹೇಳಿಕೊಂಡಿದ್ದರು.

 
 
 
 

 
 
 
 
 
 
 
 
 

I told you I knew all the sunlight spots 😉🌞

A post shared by AnushkaSharma1588 (@anushkasharma) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು