ಸೋಮವಾರ, ಜನವರಿ 17, 2022
18 °C

ಈಜುಕೊಳದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Aushka Sharma Instagram Post

ಬೆಂಗಳೂರು: ಬಾಲಿವುಡ್ ನಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಈಜುಕೊಳದಲ್ಲಿ ಇರುವ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಖದ ತುಂಬಾ ನಗು ಹೊತ್ತಿರುವ ಅನುಷ್ಕಾ ಶರ್ಮಾ ಅವರ ಈ ಫೋಟೊಗೆ ಇನ್‌ಸ್ಟಾಗ್ರಾಂನಲ್ಲಿ 25 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ಚಿತ್ರಕ್ಕೆ ಅನುಷ್ಕಾ ಅವರು ಯಾವುದೇ ಅಡಿಬರಹ ನೀಡಿಲ್ಲ, ಬದಲಾಗಿ ಹಸಿರು ಎಲೆಯ ಎಮೋಜಿ ಒಂದನ್ನು ಅಷ್ಟೇ ಬಳಸಿದ್ದಾರೆ.

ದುಬೈ ಕ್ರಿಕೆಟ್ ಪಂದ್ಯಾವಳಿ ಬಳಿಕ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿ ಮುಂಬೈಗೆ ಮರಳಿದ್ದಾರೆ. ಜತೆಗೆ ಮಗಳು ವಮಿಕಾ ಕೂಡ ಇದ್ದಾಳೆ.

ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ದೇಹದಲ್ಲಿ ಉಂಟಾಗಿದ್ದ ಬದಲಾವಣೆ ಕುರಿತು ತುಂಬಾ ಚಿಂತಿತಳಾಗಿದ್ದೆ, ಆದರೆ ಈಗ ಮತ್ತೆ ಸಹಜ ಸ್ಥಿತಿಗೆ ಮರಳಿದ ಬಳಿಕ ಹಗುರವೆನಿಸುತ್ತಿದೆ ಎಂದು ಅನುಷ್ಕಾ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಮುಂದೆ ವೆಬ್ ಸಿರೀಸ್‌ಗಳಲ್ಲಿ ತೊಡಗಿಸಿಕೊಳ್ಳುವ ಬಯಕೆಯನ್ನು ಅನುಷ್ಕಾ ಶರ್ಮಾ ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು