ಸೋಮವಾರ, ಜನವರಿ 20, 2020
20 °C

‘ತುಪಾಕಿ’ ಸೀಕ್ವೆಲ್‌: ಬಾಯ್ಬಿಟ್ಟ ದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಜನಿಕಾಂತ್‌ ಅಭಿನಯದ ‘ದರ್ಬಾರ್‌’ ಚಿತ್ರದ ಪ್ರಚಾರಕಾರ್ಯದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಎ.ಆರ್‌. ಮುರುಗದಾಸ್‌ ಅವರು ದಳಪತಿ ವಿಜಯ್‌ ನಟನೆಯ ‘ತುಪಾಕಿ’ ಚಿತ್ರದ ಸೀಕ್ವೆಲ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ.

‘ತುಪಾಕಿ 2’ ಚಿತ್ರದ ಬಗ್ಗೆ ವರ್ಷಗಳಿಂದ ನಾನಾ ರೀತಿಯಲ್ಲಿ ಸುದ್ದಿಗಳು ಕೇಳಿಬರುತ್ತಿದ್ದವು. ಆ ಚಿತ್ರದ ನಿರ್ದೇಶಕ ಮುರುಗದಾಸ್‌ ಈಗ ಅದರ ಸೀಕ್ವೆಲ್‌ ಬಗ್ಗೆ ಮಾತನಾಡಿದ್ದಾರೆ. ಸೀಕ್ವೆಲ್‌ನಲ್ಲೂ ವಿಜಯ್‌ ನಾಯಕನಟನಾಗಿರುತ್ತಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

‘ದಳಪತಿ ವಿಜಯ್‌ ಜೊತೆ ‘ತುಪಾಕಿ 2’ ಮಾಡಲು ನನಗೂ ಇಷ್ಟವಿದೆ. ನಾನು ನಿರ್ದೇಶನ ಮಾಡಿದ ಯಾವುದಾದರೂ ಎರಡು ಚಿತ್ರಗಳ ಸೀಕ್ವೆಲ್‌ ಮಾಡುವುದಾದರೆ ‘ತುಪಾಕಿ’ಯನ್ನೇ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಸೀಕ್ವೆಲ್‌ ಚಿತ್ರದಲ್ಲಿ ದಳಪತಿ ವಿಜಯ್‌ ವಿದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸುತ್ತಾನೆ ಎಂದು ಹೇಳಿ ಕತೆಯ ಗುಟ್ಟನ್ನೂ ಹೇಳಿದ್ದಾರೆ.

 ‘ತುಪಾಕಿ’ ಚಿತ್ರವು ಮುರುಗದಾಸ್‌ ಹಾಗೂ ವಿಜಯ್‌ ಅವರಿಗೆ ಭಾರಿ ಗೆಲುವನ್ನು ತಂದುಕೊಟ್ಟಿತ್ತು. ಅವರಿಬ್ಬರ ಸಿನಿ ಜೀವನದಲ್ಲಿ ಹೆಚ್ಚು ಹಿಟ್‌ ಗಳಿಸಿದ ಚಿತ್ರವದು. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಅಗರ್‌ವಾಲ್‌ ನಟಿಸಿದ್ದಾರೆ.  

ಈಗ ಎಲ್ಲಾ ಚಿತ್ರರಂಗದಲ್ಲೂ ಹಿಟ್‌ ಚಿತ್ರಗಳ ಸೀಕ್ವೆಲ್‌ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸದ್ಯ ಕಮಲ ಹಾಸನ್‌ ಅವರ ‘ಇಂಡಿಯನ್‌ 2’ ಸೀಕ್ವೆಲ್‌ ಚಿತ್ರೀಕರಣವಾಗುತ್ತಿದೆ.  ಸದ್ಯದಲ್ಲೇ ‘ತುಪಾಕಿ 2’ ಚಿತ್ರ ಸೆಟ್ಟೇರಿದರೆ ಯಾವುದೇ ಆಶ್ಚರ್ಯವಲ್ಲ.

 ಎ.ಆರ್‌. ಮುರುಗದಾಸ್‌ ಹಾಗೂ ವಿಜಯ್‌ ಜೋಡಿಯ ಎಲ್ಲಾ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಿಟ್‌ ಗಳಿಸಿವೆ. ‘ತುಪಾಕಿ’, ‘ಕತ್ತಿ’ ಹಾಗೂ ‘ಸರ್ಕಾರ್‌’ ಇದಕ್ಕೆ ಉದಾಹರಣೆಗಳು.

ಮುರುಗದಾಸ್‌ ‘ದರ್ಬಾರ್‌’ ಚಿತ್ರದ ಪ್ರಚಾರ ದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದು ಕಡೆ, ‘ಮಾಸ್ಟರ್‌’ ಚಿತ್ರದಲ್ಲಿ ವಿಜಯ್‌ ಅಭಿನಯಿಸುತ್ತಿದ್ದು, ಇದನ್ನು ಲೋಕೇಶ್‌ ಕನಕರಾಜ್‌ ನಿರ್ದೇಶಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು